ಶಿರಸಿ: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯ ಜೊತೆ ಸಂಬಂಧ ಬೆಳೆಸಿ, ಯುವತಿಗೆ ಮೋಸ ಮಾಡಿದ ಆರೋಪದಡಿ, ಶಿರಸಿಯ ಅರುಣ ಲಕ್ಷ್ಮಣ ಗೌಡ ಎಂಬುವ ಯುವಕನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಅತ ಯುವತಿಯೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮೊದಲು ಆಕೆಯ ಜೊತೆ ಪ್ರೀತಿಯ ನಾಟಕವಾಡಿದ ಈತ, ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ಸಂಬಂಧ ಹೊಂದಿದ್ದಾನೆ. ಬಳಿಕ ನೀನು ಬೇಡ, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ. ಇಷ್ಟೆ ಅಲ್ಲ, ಖಾಸಗಿ ವಿಡಿಯೋ ಮತ್ತು ಫೋಟೊಗಳನ್ನು ಸಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ. ಇದರಿಂದ ನೊಂದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ
ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಂದಾಪುರ ಪೊಲೀಸರು ಶಿರಸಿಗೆ ಆಗಮಿಸಿ, ಆರೋಪಿ ಅರುಣ ಗೌಡ ನನ್ನು ಬಂಧಿಸಿ, ಕರೊದೊಯ್ದಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಈತನ ಸಾಮಾಜಿಕ ಜಾಲತಾಣವನ್ನು ಕೂಡಾ ಜಾಲಾಡುತ್ತಿದ್ದಾರೆ.