ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿ ತಾಲೂಕಿನ ಅರಬೈಲ್ ಘಟ್ಟದಲ್ಲಿ ಉರುಳಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಅತಿವೇಗವಾದ ಚಾಲನೆಯೇ ಘಟನೆಗೆ ಕಾರಣ ಎಂದು ವರದಿಯಾಗಿದೆ.
ಆಂಧ್ರ ಪ್ರದೇಶದಿಂದ ಮಂಗಳೂರಿಗೆ ಸೀಲಿಂಗ್ ಶೀಟ್ ತುಂಬಿಸಿಕೊಂಡು ತೆರಳುವಾಗ ಘಟ್ಟದ ತಿರುವಿನಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡು ಸುರಕ್ಷಾ ಕಟ್ಟೆಗೆ ಡಿಕ್ಕಿ ಹೊಡೆದು ಲಾರಿ ಉರುಳಿಸಿದ್ದಾನೆ.
ಕಟ್ಟೆ ಇದ್ದ ಕಾರಣಕ್ಕೆ ಲಾರಿ ಕಂದಕಕ್ಕೆ ಬೀಳುವುದು ತಪ್ಪಿದೆ. ಚಾಲಕ ಹಾಗೂ ಸಹ ಚಾಲಕನಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.