ಕುಮಟಾ: ಆಯತಪ್ಪಿ ಕೇಬಲ್ ಹೊಂಡದಲ್ಲಿ ಬಿದ್ದಿರುವ ಗೋವನ್ನು ಅಗ್ನಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ತಾಲೂಕಿನ ಆಳ್ವೇಕೋಡಿ ಸಮೀಪ ಬುಧವಾರ ನಡೆದಿದೆ.
ಕಳೆದ ಹಲವು ದಿನಗಳ ಹಿಂದೆ ಕೇಬಲ್ ಲೈನ್ ಅಳವಡಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಇಂತಹ ಆಳವಾದ ಹೊಂಡಗಳನ್ನು ತೆಗೆದಿದ್ದು, ಸರಿಯಾದ ಸುರಕ್ಷತೆ ಹಾಗೂ ಮುಚ್ಚಿದಿರುವ ಕಾರಣ ಇಂತಹ ಘಟನೆಗಳು ಮರುಕಳಿಸುತ್ತಿವೆ. ತನ್ನ ಹಸಿವು ನೀಗಿಸಿಕೊಳ್ಳಲು ಮೇವಿಗಾಗಿ ಅಲೆಯುತ್ತ ಬಂದಿರುವ ಗೋವು ಕೇಬಲ್ ಹೊಂಡದಲ್ಲಿ ಬಿದ್ದು ನರಳಾಡುತ್ತಿತ್ತು. ಇದನ್ನು ಗಮನಿಸಿದ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ನವೀನ ನಾಯ್ಕ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೊಂಡದಲ್ಲಿ ಬಿದ್ದ ಗೋವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ಶೀಘ್ರದಲ್ಲೇ ಇಂತಹ ಹೊಂಡಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದಾರೆ.