ಕುಮಟಾ : ಹೊಸ ಹೊಸ ಚಿಂತನೆಗಳ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿರುವ ಸತ್ವಾಧಾರ ಫೌಂಡೇಶನ್ (ರಿ.) ಇದೇ ಬರುವ ಫೆಬ್ರವರಿ 07,ರವಿವಾರ ದಂದು ಕುಮಟಾದ ನಾದಶ್ರೀ ಕಲಾ ಕೇಂದ್ರದಲ್ಲಿ ಮಧ್ಯಾಹ್ನ 03:45 ರಿಂದ “ಭಾವ – ನವನವೀನ” ಎಂಬ ಮಸ್ತಕಕ್ಕೆ ಮುದ ನೀಡುತ್ತಲೇ ಚಿಂತನೆಗೊಳಪಡಿಸುವ ವೈವಿಧ್ಯಮಯ ಕಾರ್ಯಕ್ರಮವನ್ನು ಸಂಘಟಿಸಿದೆ.

“ಬದಲಾಗುತ್ತಿರುವ ಮನಸ್ಥಿತಿ…! ಕಾರಣ..? ಹಿರಿಯರೋ? ಕಿರಿಯರೋ?” ಎಂಬ ವಿಷಯದ ಬಗ್ಗೆ ವಿಷಯ ಮಂಥನ ಹಾಗೂ ತತ್ವ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.
ಸಮಾಜಕ್ಕೊಂದು ಉತ್ತಮ ಸಂದೇಶ ನೀಡಬಲ್ಲ ಕಾರ್ಯಕ್ರಮ ಇದಾಗಿದ್ದು ಹೊನ್ನಾವರದ ಹಿರಿಯ ವರದಿಗಾರರು ಹಾಗೂ ಚಿಂತಕರಾದ ಜಿ.ಯು ಭಟ್ಟರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

RELATED ARTICLES  ಫೆಬ್ರುವರಿ 4 ರ ಭಾನುವಾರ 150 ನೇ ಘರ್ ಘರ್ ಕೊಂಕಣಿ ಕಾರ್ಯಕ್ರಮ

ಸತ್ವಾಧಾರ ಫೌಂಡೇಶನ್ ನ ದಿಗ್ದರ್ಶಕರು ಹಾಗೂ ಉದ್ಯಮಿಗಳಾದ ವಸಂತ ರಾವ್ ಅವರು ಉದ್ಘಾಟನಾ ಸಭೆಯ ಅಧ್ಯಕ್ಷತೆ ವಹಿಸುವರು. ಕುಮಟಾದ ಖ್ಯಾತ ವೈದ್ಯರಾದ ಡಾ. ಶ್ರೀನಿವಾಸ ನಾಯಕ ಅಭ್ಯಾಗತರಾಗಿ ಪಾಲ್ಗೊಳ್ಳುವರು.

ವಿಷಯ ಮಂಥನದಲ್ಲಿ, ಹೊನ್ನಾವರದ ‘ನಾಗರಿಕ ಪತ್ರಿಕೆ’ ಸಂಪಾದಕರು ಹಾಗೂ ವಾಗ್ಮಿಗಳಾಗಿರುವ ಕೃಷ್ಣಮೂರ್ತಿ ಹೆಬ್ಬಾರ್ ಕರ್ಕಿ, ಲೇಖಕ, ಕವಿ ಹಾಗೂ ಅಂಕಣಕಾರರಾದ ತಿಗಣೇಶ ಮಾಗೋಡ, ಉಪನ್ಯಾಸಕ ಹಾಗೂ ಸಾಹಿತಿ ಡಾ ಅರವಿಂದ ಶ್ಯಾನಭಾಗ, ಶಿಕ್ಷಕ ಹಾಗೂ ಸಾಹಿತಿ ಸಂದೀಪ ಭಟ್ಟ ಹೊಸಾಕುಳಿ, ಶಿಕ್ಷಕರು, ಯಕ್ಷಗಾನ ಕಲಾವಿದರಾದ ಮಂಜುನಾಥ ಗಾಂವ್ಕರ್ ಬರ್ಗಿ, ಉಪನ್ಯಾಸಕರು ಸಾಹಿತಿಗಳು ಹಾಗೂ ಅಂಕಣಕಾರರಾದ ಪ್ರಶಾಂತ ಹೆಗಡೆ ಮೂಡಲಮನೆ ಭಾಗವಹಿಸಲಿದ್ದಾರೆ.

ವಿಷಯ ಮಂಥನದ ಜೊತೆಗೆ ನಡೆಯುವ ತತ್ವ ಗೀತ ಗಾಯನದಲ್ಲಿ ಶ್ರೀಶವಿಠಲ ರಾಷ್ಟ್ರೀಯ ಪುರಸ್ಕಾರ ಪುರಸ್ಕೃತ ಶಿವರಾಮ ಭಾಗ್ವತ ಕನಕನಹಳ್ಳಿ, ಸಾಧನಾ ಸಂಗೀತ ವಿದ್ಯಾಲಯದ ಶಿಕ್ಷಕಿ ಲಕ್ಷ್ಮೀ ಹೆಗಡೆ, ಬಗ್ಗೋಣ ಅವರು ತತ್ವಪದಗಳನ್ನು ಹಾಡಿ ಮನಕ್ಕೆ ಮುದ ನೀಡಲಿದ್ದಾರೆ.

RELATED ARTICLES  ಒಂದು ದಿನದ KAS Exclusive ತರಬೇತಿ ಕಾರ್ಯಾಗಾರ ನಾಳೆ.

ಇವರೊಂದಿಗೆ ತಬಲಾದಲ್ಲಿ ಪ್ರಸಿದ್ಧ ತಬಲಾ ವಾದಕರಾದ ವಿದ್ವಾನ್ ಎನ್. ಜಿ. ಹೆಗಡೆ ಕಪ್ಪೆಕೆರೆ, ಕೀಬೋರ್ಡ್ನಲ್ಲಿ ಪ್ರಖ್ಯಾತ ಕೀಬೋರ್ಡ ವಾದಕರಾದ ಚಂದ್ರಶೇಖರ ಭಂಡಾರಿ,‌ಮಣಕಿ ಸಾತ್ ನೀಡಲಿದ್ದಾರೆ.

ವಿನೂತನವಾಗಿ, ಇದೇ ಪ್ರಥಮ ಪ್ರಯೋಗವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಚಂದಗಾಣಿಸುವಂತೆ ಸಂಘಟಕರಾದ ಜಯದೇವ ಬಳಗಂಡಿ, ರವೀಂದ್ರ ಭಟ್ಟ ಸೂರಿ ಹಾಗೂ ಗಣೇಶ ಜೋಶಿ ಸಂಕೊಳ್ಳಿ ವಿನಂತಿಸಿದ್ದಾರೆ.