ನಾಡಿನ ಹಿರಿಯ ಕಥೆಗಾರ್ತಿ ದಿ.ಜಯಾ ಯಾಜಿ ಶಿರಾಲಿ ಅವರ ಗೌರವಾರ್ಥ ಕನ್ನಡದ ಕಥೆಗಾರ್ತಿಯರಿಗಾಗಿಯೇ ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದೆ ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೂ ಭಾಗವಹಿಸಲು ಅವಕಾಶವಿದ್ದು , ಈ ವಿಭಾಗದಲ್ಲಿ ಭಾಗವಹಿಸುವ ಆಸಕ್ತರು ಕಥೆಯೊಟ್ಟಿಗೆ ಪ್ರಾಂಶುಪಾಲರಿಂದ ಪಡೆದ ವ್ಯಾಸಂಗ ಪ್ರಮಾಣಪತ್ರ ಲಗತ್ತಿಸುವುದು ಕಡ್ಡಾಯ.
ಕಥಾಸ್ಪರ್ಧೆಯಲ್ಲಿ ಮೊದಲ ಮೂರು ಬಹುಮಾನ ಕ್ರಮವಾಗಿ ₹೬೦೦೦, ₹೩೦೦೦, ₹೨೦೦೦, ಮೆಚ್ಚುಗೆ ಬಹುಮಾನ ಪಡೆದ ಈರ್ವರಿಗೆ ತಲಾ ₹ ೧೦೦೦ ಒಳಗೊಂಡಿರುತ್ತದೆ. ಉತ್ತಮ ಕಥೆ ಬರೆದ ಓರ್ವ ಕಾಲೇಜು ವಿದ್ಯಾರ್ಥಿನಿಗೆ ₹೨೦೦೦ ಬಹುಮಾನ ನೀಡಲಾಗುವುದು. ವಿಜೇತರಿಗೆಲ್ಲರಿಗೂ ಅಭಿನಂದನ ಪತ್ರ ನೀಡಲಾಗುವುದು.
ಕಥೆ ೨೫೦೦ ಶಬ್ದಗಳು ಮೀರಿರಬಾರದು. ಕಥೆ ಕಳುಹಿಸುವ ಕೊನೆಯ ದಿನಾಂಕ ಫೆಬ್ರುವರಿ ೨೩. ನಾಡಿನ ಹಿರಿಯ ಕಥೆಗಾರರು ಸ್ಪರ್ಧೆಯ ತೀರ್ಪುಗಾರರಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ೯೬೧೧೬೫೦೦೬೬ (ವಾಟ್ಸಾಪ್) ಸಂಪರ್ಕಿಸಬಹುದು.
ಕಥೆ ಕಳುಹಿಸಬೇಕಾದ ವಿಳಾಸ : ಅರವಿಂದ ಕರ್ಕಿಕೋಡಿ, ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, , *’ಕನ್ನಡದ ಹಣತೆ’*,
ಜೆ.ಎಂ.ಎಫ್.ಸಿ. ಕೋರ್ಟ್ ಪಕ್ಕ, ಕೋರ್ಟ್ ರಸ್ತೆ, ಅಂಚೆ ಮತ್ತು ತಾಲ್ಲೂಕು : ಕುಮಟಾ (ಉತ್ತರ ಕನ್ನಡ ಜಿಲ್ಲೆ) – ೫೮೧ ೩೪೩. ನುಡಿ ತಂತ್ರಾಂಶದಲ್ಲಿ ಕಥೆ ಕಳುಹಿಸುವವರು ಇ-ಮೇಲ್ [email protected] ಬಳಸಿ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.