ಹೊನ್ನಾವರ: ತಾಲೂಕಿನ ಹೊಸಾಡ ರಂಗಿನಮೋಟಾದಲ್ಲಿ ರೈಸ್ ಮಿಲ್‌ವೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಕಟ್ಟಡ ಸಂಪೂರ್ಣ ಸುಟ್ಟುಕರಕಲಾದ ಘಟನೆ ನಡೆದಿದೆ. ಈ ರೈಸ್ ಮಿಲ್ ಸ್ಥಳೀಯ ನಿವಾಸಿ ಅನಂತ ರಾಮಚಂದ್ರ ಪೈ ಅವರಿಗೆ ಸೇರಿದೆ ಎನ್ನಲಾಗಿದೆ.

ಘಟನೆಯಲ್ಲಿ ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ, ಸಾವು-ನೋವು ಸಂಭವಿಸಿಲ್ಲ ಎಂಬುದು ಜನತೆ ಸಮಾಧಾನ ಪಡುವ ಸಂಗತಿಯಾಗಿದೆ. ಜೀವನೋಪಾಯಕ್ಕಾಗಿ ರೈಸ್ ಮಿಲ್ ಅವಲಭಿಸಿದ ಕುಟುಂಬ ಇದೀಗ ಸಂಕಷ್ಟಕ್ಕೆ ಒಳಗಾಗಿದೆ. ಮೇಲ್ನೊಟಕ್ಕೆ ಶಾರ್ಟ್ರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

RELATED ARTICLES  ಬಸ್ ಗೆ ಬೈಕ್ ಡಿಕ್ಕಿ ಆಶಾಕಾರ್ಯಕರ್ತೆ ಸಾವು.

ರೈಸ್ ಮಿಲ್ ಯಂತ್ರಗಳು, ಇನ್ನಿತರ ಉಪಕರಣಗಳು ಅಗ್ನಿ ಅವಘಡಕ್ಕೆ ತುತ್ತಾಗಿ ಅಂದಾಜು ಮೂರು ಲಕ್ಷದಷ್ಟು ಹಾನಿ ಸಂಭವಿಸಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ನರೇಂದ್ರ ದೇಸಾಯಿಯವರಿಂದ ನೋಟ್‌ಬುಕ್ ವಿತರಣೆ

ರೈಸ್ ಮಿಲ್ ಗೆ ತಗುಲಿದ ಬೆಂಕಿ ಪರಿಣಾಮ ಪಕ್ಕದಲ್ಲಿನ ಮನೆಯ ಒಂದು ಭಾಗಕ್ಕೂ ಬೆಂಕಿ ತಗುಲಿತ್ತು. ಆದರೆ, ಬೆಂಕಿಯನ್ನು ಕೂಡಲೇ ನಂದಿಸಿರುವುದರಿಂದ ಇನ್ನಷ್ಟು ಅವಘಡ ತಪ್ಪಿದೆ.

ಬೆಂಕಿ ನಂದಿಸುವಲ್ಲಿ ನೂರೈವತ್ತಕ್ಕು ಹೆಚ್ಚು ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಿದರು.