ಭಟ್ಕಳ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಾನುಗ್ರಹದೊಂದಿಗೆ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ.) ಗೋಳಿಕುಂಬ್ರಿ, ಉತ್ತರಕೊಪ್ಪ, ತಾ. ಭಟ್ಕಳ (ಉ.ಕ) ಇವರ ಸಂಯೋಜನೆಯಲ್ಲಿ ಯಕ್ಷಕಲಾಭಿಮಾನಿಗಳ ಸಹಕಾರೊಂದಿಗೆ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ (ರಿ.) ಕುಂಭಾಶಿ, ಕೊಂಡದಕುಳಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ 7 ನೇ ವರ್ಷದ ಪೌರಾಣ ಕ ಯಕ್ಷೋತ್ಸವ “ಯಕ್ಷಗಾನ ಸಪ್ತಾಹ” 2021 ಏಳು ದಿನಗಳ ನಿರಂತರ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 14.02.2021 ಭಾನುವಾರದಿಂದÀ 20.02.2021 ಶನಿವಾರದÀವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ಶ್ರೀ ರಾಘವೇಶ್ವರಭಾರತೀ ಹವ್ಯಕ ಸಭಾಭವನ, ನೀರಗದ್ದೆ, ಬೈಲೂರು. ಬಸ್ತಿಮಕ್ಕಿ, ಮುರ್ಡೇಶ್ವರದಲ್ಲಿ ಆಯೋಜಿಸಲಾಗಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಕೇಶವ ಹೆಗಡೆ ಕೊಳಗಿ, ಶ್ರೀ ಸರ್ವೇಶ್ವರ ಹೆಗಡೆ ಮೂರೂರು, ಶ್ರೀ ಶಂಕರ ಭಟ್, ಬ್ರಹ್ಮೂರು ಮತ್ತು ಶ್ರೀ ಗಣೇಶ ಯಾಜಿ ಇಡಗುಂಜಿ, ಮೃದಂಗ : ಶ್ರೀ ಗಜಾನನ ಭಂಡಾರಿ, ಬೋಳಗೆರೆ ಚಂಡೆ : ಶ್ರೀ ಲಕ್ಷ್ಮೀನಾರಾಯಣ ಹೆಗಡೆ, ಸಂಪ
ಮುಮ್ಮೇಳದಲ್ಲಿ ಸರ್ವಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ, ಶ್ರೀ ಗಣಪತಿ ಹೆಗಡೆ ತೋಟಿಮನೆ, ಶ್ರೀ ಸುಬ್ರಹ್ಮಣ್ಯ ಹೆಗಡೆ, ಮೂರೂರು, ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪಾ, ಶ್ರೀ ಈಶ್ವರ ನಾಯ್ಕ್ ಮಂಕಿ, ಶ್ರೀ ಶ್ರೀಧರ ಹೆಗಡೆ, ಚಪ್ಪರಮನೆ, ಶ್ರೀ ನಾಗೇಶ ಗೌಡ ಕುಳಿಮನೆ, ಶ್ರೀ ಮಾರುತಿ ನಾಯ್ಕ, ಶ್ರೀ ವಿನಾಯಕ ಮಧ್ಯಸ್ಥ, ಶ್ರೀ ವಿವೇಕ ಮಧ್ಯಸ್ಥ ಮತ್ತಿರರು ಭಾಗವಹಿಸಲಿದ್ದಾರೆ.

RELATED ARTICLES  ಮೆತ್ತಗೆ ಬಂದು ಜೇನು ಕದ್ದೊಯ್ದ ಕಳ್ಳರು.

ಪ್ರಸಂಗಗಳು
ದಿನಾಂಕ : 14-02-2021 : ಶನಿ ಆಂಜನೇಯ
ದಿನಾಂಕ : 15-02-2021 : ಕಂಸವಧೆ
ದಿನಾಂಕ : 16-02-2021 : ಮೀನಾಕ್ಷಿ ಕಲ್ಯಾಣ
ದಿನಾಂಕ : 17-02-2021 : ಪಂಚವಟಿ
ದಿನಾಂಕ : 18-02-2021 : ಸೀತಾಪಹಾರ
ದಿನಾಂಕ : 19-02-2021 : ಅತಿಕಾಯ
ದಿನಾಂಕ : 20-02-2021 : ಇಂದ್ರಜಿತು ಕಾಳಗ

RELATED ARTICLES  ಕಲಾವಿದರಿಗೆ ಸರಕಾರದಿಂದ ವಿಶೇಷ ಸವಲತ್ತುಗಳು ಸಿಗಬೇಕು : ಗಣಪತಿ ಉಳ್ವೇಕರ