ಶಿರಸಿ: ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿಯಲ್ಲಿ ಫೆ.12 ರಂದು 2019-20ನೇ ಸಾಲಿನ ದತ್ತಿನಿಧಿ ಪುರಸ್ಕಾರ ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿಎಂಟನೇ ಸ್ಥಾನ ಪಡೆದು ಸಾಧನೆ ಮಾಡಿದ ಸಂಧ್ಯಾ ಗಂಗಾಧರ ಭಟ್ಟ ಬಪ್ಪನಳ್ಳಿ ಇವಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವನಾಥ ಶರ್ಮಾ ನಾಡಗುಳಿ ಮಾತನಾಡಿ ಈ ಸಂಸ್ಥೆ ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆಯುತ್ತಿರುವುದು ದಕ್ಷ ಆಡಳಿತ ಮಂಡಳಿ ಹಾಗೂ ಪ್ರಾಮಾಣಿಕ ಶಿಕ್ಷಕ ವರ್ಗ ಕಾರಣವಾಗಿದೆ. ಈ ಪ್ರೌಢಶಾಲೆಯಲ್ಲಿ ಕೇವಲ ರ್ಯಾಂಕ್ ಅಲ್ಲದೇ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕøತಿಕ, ಕ್ರೀಡೆ ಹಾಗೂ ಕರಕುಶಲ ವಿಭಾಗದಲ್ಲಿಯೂ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ತೋರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ನುಡಿದರು. ವೇದಿಕೆಯ ಮೇಲೆ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಜಿ ಆರ್ ಹೆಗಡ ಕಿಬ್ಬಳ್ಳಿ, ಗೌರವ ಸದಸ್ಯರಾದ ಕೆ ಆರ್ ಹೆಗಡೆ ಅಮ್ಮಚ್ಚಿ, ಸದಸ್ಯರಾದ ಎಮ್‍ಎಸ್ ಹೆಗಡೆ ನೇರ್ಲಹದ್ದ, ಸಿ ಎಸ್ ಹೆಗಡೆ ಮತ್ತಿಗಾರ, ನೆಗ್ಗು ಗ್ರಾಮ ಪಂಚಾಯತದ ನೂತನ ಅಧ್ಯಕ್ಷೆ ನಾಗವೇಣಿ ಆಚಾರಿ, ಪಿಡಿಓ ಮಮತಾ ಗುಡ್ಡದಮನೆ, ದಾನಿಗಳಾದ ಎಮ್‍ಆರ್ ಹೆಗಡೆ ಪಟ್ಟಿಗುಂಡಿ, ಶ್ರೀಧರ ಹೆಗಡೆ ತಾರೇಹಳ್ಳಿ, ಮಂಜುನಾಥ ಹೆಗಡೆ ಮುಳಕನಹಳ್ಳಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ ನೆಗ್ಗು ಗ್ರಾಮ ಪಂಚಾಯತದ ವತಿಯಿಂದ ಎಸ್‍ಎಸ್‍ಎಲ್‍ಸಿಯಲ್ಲಿ ಪ್ರಥಮ, ದ್ವಿತೀಯ, ತೃತಿಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಮುಖ್ಯಾಧ್ಯಾಪಕ ಎಮ್ ಜಿ ಹೆಗಡೆ ಸ್ವಾಗತಿಸಿದರು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕ ಗಣೇಶ ಜಿ ಹೆಗಡೆ ನಿರೂಪಿಸಿದರು, ಮುಕ್ತಾ ಎಸ್ ಭಟ್ಟ್ ವಂದಿಸಿದರು, ನಾರಾಯಣ ದೈಮನೆ ಕಾರ್ಯಕ್ರಮ ನಿರ್ವಹಿಸಿದರು.