ಅಂಕೋಲಾ: ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‍ಸಿ (ಕೇಂದ್ರಲೋಕ ಸೇವಾ ಆಯೋಗ) ಯವರು ಇತ್ತೀಚಿಗೆ ಭಾರತದ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಮಿಲಿಟರಿ ಇಂಜನೀಯರ ಸರ್ವಿಸ್ (ಎಂಇಎಸ್), ಡೆಪ್ಯೂಟಿ ಆರ್ಕಿಟೆಕ್ಟ್ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಅಂಕೋಲಾ ಮೂಲದ ವಿಜಯಶ್ರೀ ವಾಸುದೇವ ನಾಯಕ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

RELATED ARTICLES  ಶಿಕ್ಷಕ ಹಾಗೂ ನಿರೂಪಕ ರವೀಂದ್ರ ಭಟ್ಟ ಸೂರಿಯವರಿಗೆ ಗೌರವ ಡಾಕ್ಟರೇಟ್.

ಕಾರವಾರದ ಬಾಲ ಮಂದಿರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ನಂತರ ಬೆಂಗಳೂರಿನ ಜಯನಗರದಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದರು. ಬಸವನಗುಡಿ ಬಿಎಂಎಸ್‍ಐಟಿಯಲ್ಲಿ ಆರ್ಕಿಟೆಕ್ಸ್ ವಿಭಾಗದಲ್ಲಿ ವ್ಯಾಸಂಗ ಮುಗಿಸಿದ್ದಾರೆ.

ಇವರು ಹಿಚ್ಚಡ ಮೂಲದ ನಿವೃತ್ತ ಡಿವೈಎಸ್ಪಿ ವಾಸುದೇವ ನಾಯಕ ಮತ್ತು ಗುಳ್ಳಾಪುರದ ಸರ್ಕಾರಿ ಕಾಲೇಜಿನ ಉಪನ್ಯಾಸಕಿ ಕಲ್ಪನಾ ನಾಯಕ ದಂಪತಿಗಳ ಪುತ್ರಿ.

RELATED ARTICLES  ಮಳೆಯ ಅವಾಂತರ ಧರೆಗುರುಳಿತು ಮನೆ..!

ಲಂಡನ್ ಮತ್ತಿತರ ಮಲ್ಟಿನ್ಯಾಶನಲ್ ಕಂಪನಿಗಳಲ್ಲಿ ಉದ್ಯೋಗ ದೊರೆತರೂ, ದೇಶ ಸೇವೆ ಕನಸು ಹೊತ್ತು ಯುಪಿಎಸ್‍ಸಿ ಪರೀಕ್ಷೆ ಎದುರಿಸಿದ ವಿಜಯಶ್ರೀ ಪ್ರಥಮ ರ್ಯಾಂಕ್ ಗಳಿಸಿದ್ದಾಳೆ. ವಿಜಯಶ್ರೀಯ ಸಹೋದರ ವಿಕ್ರಮಾದಿತ್ಯ ಬೆಂಗಳೂರಿನಲ್ಲಿ ಸಾಪ್ಟ್‍ವೇರ್ ಇಂಜೀಯರ್ ಆಗಿದ್ದಾರೆ.