ಕಾರವಾರ; ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಳೆದ ಕೆಲವು ವರ್ಷಗಳಿಂದ ತನ್ನ ಅನೇಕ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಅನುದಾನದ ಮತ್ತು ಸಿಬ್ಬಂದಿಗಳ ಕೊರತೆಯಿಂದ ಅಸಕ್ತವಾಗಿದೆ. ಕಾರಣ ಸರ್ಕಾರ ಇಲಾಖೆಗೆ ಶಕ್ತಿ ತುಂಬುವುದಕ್ಕೆ ಮುಂದಾಗಬೇಕು. ಇದನ್ನು ಒಂದು ಆದ್ಯತೆಯ ಇಲಾಖೆÉಯಾಗಿ ಪರಿಗಣ ಸಬೇಕು. ಮುಂದಿನ ಬಜೇಟ್‍ನಲ್ಲಿ ಇಲಾಖೆಗೆ ಅಗತ್ಯವಾದ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ನಾಗರಾಜ ನಾಯ್ಕ ಮಾಳ್ಕೋಡ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ್ದು, ರಾಜ್ಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದ್ದು,ರಾಜ್ಯ ಸಂಪುಟದಲ್ಲಿ ಪ್ರತ್ಯೇಕ ಒಂದು ಖಾತೆ ಇದೆ, ಸಚಿವರಿದ್ದಾರೆ.ಆದರೂ ಈ ಇಲಾಖೆಯ ಕಾರ್ಯ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ರಾಜ್ಯಾದ್ಯಂತ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ತಾಲೂಕ ಮಟ್ಟದಲ್ಲಿ ಬಹುತೇಕ ಪ್ರಭಾರಿ ಅಧಿಕಾರಿಗಳಿದ್ದಾರೆ. ಖಾಲಿ ಇರುವ ಸಿಬ್ಬಂದಿಗಳನ್ನು ಭರ್ತಿ ಮಾಡುವಂತಾಗಬೇಕು. ಒಟ್ಟಾರೆ ಜನಸಂಖ್ಯೆಯಲ್ಲಿ ದೊಡ್ಡ ಸಮೂಹವಾದ ವಿದ್ಯಾರ್ಥಿ ಮತ್ತು ಯುವಜನರನ್ನು ಒಳಗೊಂಡಿರುವ ಈ ಇಲಾಖೆಯನ್ನು ಶಿಕ್ಷಣ, ಆರೋಗ್ಯ ಮೊದಲಾದ ಇಲಾಖೆಗಳಂತೆ ಆದ್ಯತೆಯ ಇಲಾಖೆಯಾಗಿ ಪರಿಗಣ ಸಬೇಕು.
ಕ್ರೀಯಾಶೀಲ ಸಂಘಟನೆ ಮತ್ತು ಯುವ ಜನರಿಗೆ ಮೊದಲಿನಿಂದ ನೀಡುತ್ತಾ ಬಂದಿರುವ ಜಿಲ್ಲಾ ಹಾಗೂ ರಾಜ್ಯ ಮಟ್ಟದ ‘ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ’ಯನ್ನು ಕೆಲ ವರ್ಷಗಳಿಂದ ಕೈಬಿಡಲಾಗಿದೆ. ಅದನ್ನು ಪುನರ್ ಆರಂಭಿಸಬೇಕು. ಅರ್ಹರನ್ನು ಗುರುತಿಸಿ ನೀಡುವಂತಾಗಬೇಕು. ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸಬೇಕು. ಆ ಮೂಲಕ ಯುವಜನರ ನಡುವೆ ಕೆಲಸ ಮಾಡುವ ವ್ಯಕ್ತಿ ಮತ್ತು ಸಂಘಟನೆಯನ್ನು ಪ್ರೋತ್ಸಾಹಿಸಬೇಕು. ಯುವಕ ಮತ್ತು ಯುವತಿ ಸಂಘಗಳ ನೊಂದಣ ಹಾಗೂ ನವೀಕರಣವನ್ನು ಸರಳೀಕರಣಗೊಳಿಸಬೇಕು.
ಸಂಘಗಳು ಕ್ರೀಯಾಶೀಲಾವಾಗಿರುವಂತೆ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ನೀಡುವಂತಾಗಬೇಕು.
ಪ್ರತಿಯೊಂದು ತಾಲೂಕಿನಲ್ಲಿಯೂ ತಾಲೂಕ ಮಟ್ಟದ ಕ್ರೀಡಾಂಗಣ ನಿರ್ಮಾಣ ಆಗುವಂತಾಗಬೇಕು. ಕಳೆದ ಅನೇಕ ವರ್ಷಗಳಿಂದ ಆರಂಭಿಕ ಹಂತದಲ್ಲಿ ಇರುವ ವಿವಿಧ ತಾಲೂಕಿನ ಕ್ರೀಡಾಂಗಣ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವಂತಾಗಬೇಕು. ಅದಕ್ಕೆ ಬೇಕಾಗಿರುವ ಅಗತ್ಯ ಅನುದಾನವನ್ನು ತಕ್ಷಣ ಮಂಜೂರು ಮಾಡುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.
…………………..
ಕಳೆದ ನಾಲ್ಕು ವರ್ಷಗಳಿಂದ ತಾಲೂಕ ಮಟ್ಟದಲ್ಲಿ ನಡೆಯುತ್ತಿರುವ ಯುವಜನ ಮೇಳಗಳನ್ನು ಕೈಬಿಡಲಾಗಿದೆ. ನೇರವಾಗಿ ಜಿಲ್ಲಾಮಟ್ಟದಲ್ಲಿ ಯುವಜನ ಮೇಳಗಳನ್ನು ನಡೆಸಲಾಗುತ್ತಿದೆ. ಇದು ತೀರಾ ಅವೈಜ್ಞಾನಿಕವಾಗಿದೆ. ನೇರವಾಗಿ ಜಿಲ್ಲಾ ಮಟ್ಟದಲ್ಲಿ ಯುವಜನ ಮೇಳಗಳು ಆಗುವುದರಿಂದ ಸಂಘಟಿತ ತಾಲೂಕಿನವರು ಹೆಚ್ಚಿಗೆ ಸ್ಪರ್ಧೆ ಮಾಡುತ್ತಾರೆ. ಉಳಿದ ತಾಲೂಕಿನ ಸ್ಪರ್ಧಿಗಳು ತೀರಾ ಕಡಿಮೆ ಇರುತ್ತಾರೆ. ನೈಜ ಪ್ರತಿಭೆಗಳಿಗೆ ಅವಕಾಶ ವಂಚನೆಯಾಗುತ್ತದೆ. ಸೊರಗುತ್ತಿರುವ ಯುವಜನ ಮೇಳಗಳಿಗೆ ಶಕ್ತಿ ತುಂಬುವ ಕೆಲಸಗಳಾಗಬೇಕು. ಬದಲಾಗಿ ರದ್ದುಗೊಳಿಸುವುದಲ್ಲ.ಯುವಜನ ಮೇಳಗಳಲ್ಲಿ ಆಯ್ಕೆಯಾದ ತಂಡಗಳಲ್ಲಿಗೆ ನಗದು ಬಹಮಾನ ನೀಡುವಂತಾಗಬೇಕು. ಸರಕಾರಿ ಉತ್ಸವಗಳಾದ ಕರಾವಳಿ ಉತ್ಸವ, ಕದಂಬೋತ್ಸವ, ಹಂಪಿ ಉತ್ಸವದಂತ ಕಾರ್ಯಕ್ರಮಗಳಲ್ಲಿ ಅವಕಾಶವನ್ನು ನೀಡುವಂತಾಗಬೇಕು.