ಕುಮಟಾ : ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ನಿನ್ನೆ ನಡೆದ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸ್ನೇಹಾ ರೇವಣಕರ್ ಖರ್ವಾ ಪ್ರಥಮ,ಜಿ ಎಸ್ ಹೆಗಡೆ ಹೊನ್ನಾವರ ದ್ವಿತೀಯ,ಪ್ರತೀಕ್ ಕಾಮತ್ ಅಂಕೋಲಾ ತೃತೀಯ ಹಾಗೂ ಶಮಾ ಹೆಗಡೆ,ಹರ್ಷಿತಾ ನಾಯ್ಕ್, ವಿನಯಾ ಯಾಜಿ,ದ್ರಷ್ಯಾ ನಾಯಕ್,ಕವಿತಾ ಗೌಡ ಇವರು ಸಮಾಧಾನಕರ ಬಹುಮಾನ ಪಡೆದುಕೊಂಡರು.
ಇದೇ ಸಂಧರ್ಭದಲ್ಲಿ ಗಂಗಾ ಹೆಗಡೆ ಇವರಿಗೆ ಉಚಿತ ಅಡುಗೆ ಆನಿಲ ವಿತರಿಸಲಾಯಿತು. ಜೋನ್ ಚೇರ್ಮನ್ ಎನ್ ಜಿ ಭಟ್,ರೀಜನ್ ಚೇರ್ಮನ್ ಎಸ್ ಸುರೇಶ್,ಲಯನ್ಸ್ ಕುಮಟಾ ಅಧ್ಯಕ್ಷೆ ವಿನಯಾ ಹೆಗಡೆ,ಕೆಬಿನೆಟ್ ಕಾರ್ಯದರ್ಶಿ ನೀರಜಾ ನಾಯಕ್,ಕಾರ್ಯದರ್ಶಿ ಎಸ್ ಎಸ್ ಹೆಗಡೆ,ಕೆಬಿನೆಟ್ ಸಂಯೋಜಕರದ ಎಸ್ ಜೆ ಕೈರಣ್ಣ ,ಹಾಗೂ ಹೊನ್ನಾವರ ಅಂಕೋಲಸಿಟಿ ,ಕುಮಟಾ ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.