ಹೊನ್ನಾವರ : ತಾಲೂಕಿನ ಗುಂಡಬಾಳ ನದಿಗೆ ಜಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ರಾಜು ದಾಸ್ ಮಹಾಲೆ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಹೊನ್ನಾವರ ತಾಲೂಕಿನ ಹಡಿನಬಾಳ ಸೇತುವೆ ಮೇಲಿಂದ ಗುಂಡಬಾಳ ನದಿಗೆ ಹಾರಿ ಮೃತಪಟ್ಟಿದ್ದಾರೆ.
ಸೇತುವೆಯಿಂದ ನದಿಗೆ ಜಿಗಿದಿದ್ದರಿಂದ ಅಗ್ನಿಶಾಮಕ ದಳ ಮತ್ತು ಪೋಲಿಸ್ ಸಿಬ್ಬಂದಿಗಳು ತೀವೃ ಶೋಧ ನಡೆಸಿದ್ದರು. ಸೋಮವಾರ ಸಂಜೆ ವೇಳೆ ಮೃತ ದೇಹ ದೊರೆತಿದ್ದು ಮೇಲಕ್ಕೆತ್ತಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.