ಹೊನ್ನಾವರ: ತಾಲೂಕಿನ ಕಾಸರಕೋಡ ಟೋಂಕಾ ನಿರ್ಮಾಣ ಹಂತದ ಖಾಸಗಿ ಬಂದರು ಪ್ರದೇಶದ ಬಳಿ ಅಪರೂಪದ ಕಡಲಾಮೆ ಮೊಟ್ಟೆ ಪತ್ತೆಯಾಗಿದೆ. ಹಳದೀಪುರ ಹಾಗೂ ಅಪ್ಸರಕೊಂಡ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದ ಈ ಮೊಟ್ಟೆಗಳನ್ನು ಅರಣ್ಯ ಇಲಾಖೆಯವರು ಸಂರಕ್ಷಣೆ ಮಾಡಿ ಸಮುದ್ರಕ್ಕೆ ಪ್ರತಿ ವರ್ಷ ಬಿಡುತ್ತಾ ಬಂದಿದ್ದರು.
ಆದರೆ ಮೀನುಗಾರಿಕಾ ಬಂದರು ಪ್ರದೇಶದ ಸಮೀಪದಲ್ಲಿ ಈ ಮೊಟ್ಟೆ ಪತ್ತೆಯಾಗಿರುದಕ್ಕೆ ಇದೀಗ ಇತ್ತೀಚಿನ ಮೀನುಗಾರರ ಹೋರಾಟಕ್ಕೆ ಪುಷ್ಟಿ ನೀಡುತ್ತೀದೆ. ಬಂದರು ನಿರ್ಮಾಣದ ವಿಷಯದಲ್ಲಿ ಮೀನುಗಾರರು ಮತ್ತು ಅಧಿಕಾರಿಗಳ ನಡುವೆ ಪ್ರತಿನಿತ್ಯ ವಾಕ್ಸಮರ ನಡೆಯುತ್ತಿತ್ತು. ಕಳೆದ ೧೦ ದಿನಗಳಿಂದ ನಿರ್ಮಾಣವಾಗುತ್ತಿರುವ ರಸ್ತೆ ಮದ್ಯೆ ಪ್ರತಿಭಟನೆ ನಡೆಯುತ್ತಿತ್ತು. ಇದೀಗ ಕಡಲಾಮೆ ಮೊಟ್ಟೆ ದೊರೆತಿರುದರಿಂದ ಸುರಕ್ಷಿತ ತಾಣ ಎನ್ನುವ ಸ್ಥಳೀಯರ ವಾದಕ್ಕೆ ಪುಷ್ಟಿ ದೊರೆತಿದ್ದರು ಮೊಟ್ಟೆ ನೂರಾರು ಪ್ರಮಾಣದಲ್ಲಿ ಪತ್ತೆಯಾಗಿರುದಕ್ಕೆ ಹಲವು ಅನುಮಾನಗಳನ್ನು ಕಾಡಲು ಆರಂಭಿಸಿದೆ. ಮೊಟ್ಟೆ ದೊರೆತ ಸ್ಥಳ ಹಾಗೂ ಮೊಟ್ಟೆಯನ್ನು ಸೂಕ್ಷö್ಮವಾಗಿ ಗಮನಿಸಿದರೆ ಈ ಸ್ಥಳಕ್ಕೆ ಬೇರೆ ಯಾರಾದರು ತಂದು ಇಟ್ಟಿರಬಹುದೇನೊ ಎನ್ನುವ ಅನುಮಾನವು ಕಾಡುತ್ತಿದೆ. ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೇ ಭೇಟಿ ನೀಡಿ ಸಂರಕ್ಷಣೆ ನಡೆಸಿದ್ದಾರೆ.