ಕುಮಟಾ- ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಕುಮಟಾ ಜಾತ್ರೆಯ ಪ್ರಯುಕ್ತ ನಡೆಸುವ ಯಕ್ಷಗಾನ ವೇದಿಕೆಯಲ್ಲಿ ದಿನಾಂಕ:19-02-2021ರಂದು ರಾತ್ರಿ 8.30 ಗಂಟೆಗೆ ಮಣಕಿ ಮೈದಾನದಲ್ಲಿ ಕಲಾ ಗಂಗೋತ್ರಿ ಕುಮಟಾ ಸಂಘಟನೆಯ ಸಂಸ್ಥಾಪಕರು, ರಾಜ್ಯ ಯುವ ಪ್ರಶಸ್ತಿ ಪುರಸ್ಕ್ರತ ಸಾಮಾಜಿಕ ಕಾರ್ಯಕರ್ತರಾದ ದಿ|| ದುರ್ಗಾದಾಸ ಗಂಗೊಳ್ಳಿಯವರ ಸ್ಮರಣಾರ್ಥ ಆಶಕ್ತ ಕಲಾವಿದರಿಗಾಗಿ ನೀಡುವ ಪ್ರಶಸ್ತಿ ಹಾಗೂ ಹದಿನೈದು ಸಾವಿರ ರೂಪಾಯಿ ನಗದು ಮೊತ್ತವನ್ನು ಹಿರಿಯ ಯಕ್ಷಗಾನ ಕಲಾವಿದರು, ಭಾಗವತರಾಗಿರುವ ಶ್ರೀ ಕೃಷ್ಣ ಭಂಡಾರಿ, ಗುಣವಂತೆ ಇವರಿಗೆ ಗಣ್ಯರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಗುವುದು.
ನಂತರ ಪೆರ್ಡೂರು ಮೇಳದವರಿಂದ “ಸುಧನ್ವಾರ್ಜುನ-ಚಂದ್ರಾವಳಿ-ಸುದರ್ಶನ ವಿಜಯ” ಎಂಬ ಪೌರಾಣ ಕ ಪ್ರಸಂಗಗಳ ಪ್ರದರ್ಶನವಿರುತ್ತದೆ. ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಕ್ಷಗಾನ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಕಲಾ ಗಂಗೋತ್ರಿಯ ಅಧ್ಯಕ್ಷರಾದ ಶ್ರೀಧರ ಎಮ್.ನಾಯ್ಕ ಹಾಗೂ ಸದಸ್ಯರು ವಿನಂತಿಸಿದ್ದಾರೆ.