ಬೆಂಗಳೂರು/ಕುಮಟಾ: ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಹೊಸದೆಹಲಿಯ, ಕರ್ನಾಟಕ ಪ್ರಾದೇಶಿಕ ಶಾಖೆ ಬೆಂಗಳೂರು ಮತ್ತು ಧಾರಣಾತ್ಮಕ ಅಭಿವೃದ್ಧಿ ಕೇಂದ್ರ ಬೆಂಗಳೂರು ಇವರ ಸಹಭಾಗಿತ್ವದಲ್ಲಿ “ರೀ ಥಿಂಕಿಂಗ್ ಪೋಲಿಸ ರೀಫೊi ಇನ್ ಇಂಡಿಯಾ ” ಎಂಬ ವಿಷಯಾಧಾರಿತ ಚಿಂತನಾತ್ಮಕ ಕಾರ್ಯಾಗಾರವು ಇತ್ತೀಚೆಗೆ (೩೦- ಜನವರಿ ೨೦೨೧ ರಂದು) ನಡೆಯಿತು. ಆಯೋಜಕ ಸಂಸ್ಥೆಗಳ ಮುಖ್ಯಸ್ಥರಾದ ೧) ಡಾ. ಎ. ರವೀಂದ್ರ (ನಿಕಟಪೂರ್ವ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ) ಅವರ ಅಧ್ಯಕ್ಷತೆಯಲ್ಲಿ ಮತ್ತು ೨) ಶ್ರೀ ಎಸ್ ರಾಮನಾಥನ್ (ಕೇಂದ್ರ ಸರಕಾರದ ಮಾಜಿ ಕಾರ್ಯದರ್ಶಿಗಳೂ ಹೌದು) ಅವರ ಪ್ರಸ್ತಾವನೆ ಮತ್ತು ಕಾರ್ಯಸೂಚಿಯೊಂದಿಗೆ ಕಲಾಪ ಚಾಲನೆಗೊಂಡಿತು.

ಪ್ರಧಾನ ವಕ್ತಾರರಾಗಿ, ಈಗಿನ ಡೈರೆಕ್ಟರ್-ಜನರಲ್ ಮತ್ತು ಇನ್‌ಸ್ಪೆಕ್ಟರ್-ಜನರಲ್ ಆಫ್ ಪೋಲಿಸ್ ಕರ್ನಾಟಕ ರಾಜ್ಯ ಆದ ಶ್ರೀ ಪ್ರವೀಣ ಸೂದ, ಮಾಜಿ ಡೈರೆಕ್ಟರ್-ಜನರಲ್ ಮತ್ತು ಇನ್‌ಸ್ಪೆಕ್ಟರ ಜನರಲ್‌ಗಳಾದ ಡಾ. ಅಜಯಕುಮಾರ ಸಿಂಗ್ ಮತ್ತು ಶ್ರೀ ಆರ್ ಶ್ರೀಕುಮಾರ, ಕರ್ನಾಟಕ ಪೋಲಿಸ್ ದೂರು ಪ್ರಾಧಿಕಾರದ ಹಾಲಿ ಸದಸ್ಯರಾದ ಶ್ರೀ ಕೆ. ಎಚ್. ಗೋಪಾಲ ಗೌಡಾ ಇವರು ಪ್ರಧಾನ ವಕ್ತಾರರಾಗಿ ಪಾಲ್ಗೊಂಡು, ಭಾರತೀಯ ವ್ಯವಸ್ಥೆಯ ಗುಣಾತ್ಮಕ ಆಯಾಮಗಳನ್ನು ನೆನಪಿಸಿದರಲ್ಲದೇ ವ್ಯವಸ್ಥೆಯ ಉನ್ನತೀಕರಣದ ಗಮನಾರ್ಹ ಅಂಶಗಳನ್ನು ವಿವರಿಸಿ ಮಂಡಿಸಿದರು. ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಹೊಸದೆಹಲಿಯ ಸದಸ್ಯರಾದ ಕುಮಟಾದ ಶ್ರೀ ತ್ರಿವಿಕ್ರಮ ಬಿ.ಪೈ ಆಮಂತ್ರಿತರಾಗಿ ಭಾಗವಹಿಸಿ ವಿಷಯಾಧಾರಿತ ಸ್ಪಂದನೆಯ ಅವಕಾಶದಲ್ಲಿ ಪಾಲ್ಗೊಂಡು: ಕಾನ್ಸ್ಟೇಬಲ್ ಮಟ್ಟದ ಸೂಕ್ಷ್ಮತೆ ಮತ್ತು ಪ್ರಾಧಾನ್ಯವನ್ನು ನೆನಪಿಸುತ್ತಾ ಶೈಕ್ಷಣಿಕ ಅರ್ಹತೆಯನ್ನು ಪದವಿ ಮಟ್ಟಕ್ಕೆ ಕಡ್ಡಾಯಗೊಳಿಸಬೇಕಾಗಿದೆ, ಮತ್ತು ಆ ಮಟ್ಟದಲ್ಲಿಯೇ ಮನೋಬಲ, ಕಾರ್ಯಕ್ಷಮತೆ, ತ್ರಿಭಾಷಾ ಪ್ರಾವಿಣ್ಯ, ಸಂವಹನ ಕೌಶಲ್ಯ, ಸಾಮಾಜಿಕ ಪ್ರಜ್ಞೆ ಮತ್ತು ತಾತ್ವಿಕತೆಗಳನ್ನು ಹೆಚ್ಚು ಹೆಚ್ಚು ವೃದ್ಧಿಸುವ ಆಯಾಮಗಳಿಗೆ ಪ್ರವೇಶಪೂರ್ವ ತರಬೇತಿಯಲ್ಲಿ ಹೆಚ್ಚಿನ ಒತ್ತು/ಅನುವು ಮಾಡಬಹುದಾಗಿದೆ, ಹಾಗೆಯೇ ಕೆಲವು ದೇಶಗಳಲ್ಲಿರುವಂತೆ “ಡಿಪ್ಲೋಮಾ ಇನ್ ಪೋಲಿಸಿಂಗ್ ಪಠ್ಯಕ್ರಮವನ್ನು ರಚಿಸಿ ಸೇವಾ ಪ್ರವೇಶದ ಅಥವಾ ಪ್ರವೇಶಪೂರ್ವ ಹಂತದಲ್ಲಿಯೇ ಅಳವಡಿಸಬಹುದಾಗಿದೆ: ತನ್ಮೂಲಕ ಈಗಿನ ವ್ಯವಸ್ಥೆಯ ಉತ್ತಮ ಗುಣಮಟ್ಟವನ್ನು ಅತ್ಯುತ್ತಮ ಮಟ್ಟಕ್ಕೆ ಸುಲಭವಾಗಿ ಕೊಂಡೊಯ್ಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

RELATED ARTICLES  ಕಾರವಾರದಲ್ಲಿ ಗಮನಸೆಳೆದ ದ್ರಾಕ್ಷಾರಸ ಉತ್ಸವ!

ಆಯೋಜಕ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ|| ಜೀವನಕುಮಾರರವರು ಕಲಾಪಗಳ ಸಮಯೋಜಿತ ನಿರ್ವಹಣೆಯಲ್ಲಿ ಮಹತ್ತರ ಪಾತ್ರ ವಹಿಸಿ ಕೊನೆಯಲ್ಲಿ ವಂದಿಸಿದರು.