ಕುಮಟಾ: 1999 ರಲ್ಲಿ ರೋಟರಿ ಸಂಸ್ಥೆಯಿಂದ ಸ್ಥಾಪಿಸಲ್ಪಟ್ಟು, ಸಾವಿರಾರು ಜನರ ಪ್ರಾಣ ರಕ್ಷಣೆಗೆ ನೆರವಾದ ಉತ್ತರ ಕನ್ನಡ ಬ್ಲಡ್ ಬ್ಯಾಂಕ್‍ಗೆ ಅಗತ್ಯವಾಗಿ ಬೇಕಾಗಿದ್ದ ಬ್ಲಡ್ ಸ್ಟೋರೇಜ್ ರೆಫ್ರಿಜಿರೇಟರ್ ವಿತ್ ಟೆಂಪರೇಚರ್ ಗ್ರಾಫ್‍ನ್ನು (ಉಷ್ಣಾಂಶ ಲೇಖಿ ರಕ್ತ ಸಂಗ್ರಾಹಕ ಶೈತ್ಯಕಾರಕ)ವನ್ನು ಖರೀದಿಸಿಲು ಸಹಾಯಕವಾಗುವಂತೆ ರೋಟರಿ ವತಿಯಿಂದ ರೋಟೇರಿಯನ್‍ರು ಸಂಗ್ರಹಿಸಿದ 1.5 ಲಕ್ಷ ರು. ಚೆಕ್‍ನ್ನು ರೋಟರಿ ಜಿಲ್ಲಾ ಗವರ್ನರ್ ರೋ. ಸಂಗ್ರಾಮ ಪಾಟೀಲ್ ಅವರು ಬ್ಲಡ್ ಬ್ಯಾಂಕ್ ಆಡಳಿತಾಧಿಕಾರಿ ಡಾ. ಎಂ.ವಿ.ಮೂಡ್ಲಗಿರಿ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರೋ.ಉತ್ಕರ್ಷಾ ಪಾಟೀಲ್, ಪಿಡಿಜಿ ರೋ. ರವಿಕಿರಣ ಕುಲಕರ್ಣಿ, ರೋ. ಜಯಶ್ರೀ ಕಾಮತ, ಕುಮಟಾ ರೋಟರಿ ಅಧ್ಯಕ್ಷ ರೋ. ಶಶಿಕಾಂತ ಕೊಲೇಕರ, ಕಾರ್ಯದರ್ಶಿ ಅತುಲ್ ಕಾಮತ, ಸದಸ್ಯರಾದ ಜೈವಿಠ್ಠಲ ಕುಬಾಲ, ವಿನಾಯಕ ಹೆಗಡೆ, ಎನ್.ಆರ್.ಗಜು, ಡಾ. ನಮೃತಾ ಶಾನಭಾಗ, ಶಿಲ್ಪಾ ಜಿನರಾಜ್, ಮೊದಲಾದವರು ಉಪಸ್ಥಿತರಿದ್ದರು.