ಕುಮಟಾ : ಗೋಕರ್ಣದ ಲಾಯನ್ಸ್ ಕ್ಲಬ್ ಸಹಯೋಗದಲ್ಲಿ ಗುರುವಾರ ತಾ.18/2/2021 ರಂದು ಗೋಕರ್ಣದ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಅಂಕೋಲಾ ಸರಕಾರೀ ಆಸ್ಪತ್ರೆ ಗಳಲ್ಲಿ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಆಯ್ಕೆಗೊಂಡ ಅಂತೂ 22 ಫಲಾನುಭವಿಗಳಿಗೆ ಕುಮಟಾ ಲಾಯನ್ಸ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ ಅವರ ನೇತ್ರತ್ವದಲ್ಲಿ ಉಚಿತ ಶಸ್ತ್ರಚಿಕಿತ್ಸೆಗಳು ಜರುಗಿದವು.

ಈ ಯಶಸ್ವೀ ಶಸ್ತ್ರಚಿಕಿತ್ಸೆ ಗಳ ನಂತರ ಫಲಾನುಭವಿಗಳನ್ನು ಆಸ್ಪತ್ರೆಯಿಂದ ಶನಿವಾರ ಬೆಳಿಗ್ಗೆ ಬೀಳ್ಕೊಡುವ ಸಂದರ್ಭದಲ್ಲಿ ಲಯನ್ ಡಿಸ್ಟ್ರಿಕ್ಟ್ 317ಬಿ PDG ಗಣಪತಿ ನಾಯಕ,ಗೋಕರ್ಣ ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎಚ್.ನಾಯಕ ಹಾಗೂ ಟ್ರೆಸರರ್ ಮಹೇಶ ಆರ್.ನಾಯಕ ಸಗಡಗೇರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಕಾರ್ಯಚಟುವಟಿಕೆಗಳ ವೀಕ್ಷಿಸಿ ಅನುಭವದ ಹಿತನುಡಿಗಳನ್ನಾಡಿ ಫಲಾನುಭವಿಗಳಿಗೆ ಹಣ್ಣು ವಿತರಿಸಿ ಶುಭ ಕೋರಿದರು.

RELATED ARTICLES  ಶಿರಸಿ- ಕುಮಟಾ ಮಾರ್ಗ ಸಂಪೂರ್ಣ ಬಂದ್ ಇಲ್ಲ :ಉಪ ವಿಭಾಗಾಧಿಕಾರಿ ಅಜಿತ್ ಎಂ.

ಶಿಬಿರದಲ್ಲಿ ಪಾಲ್ಗೊಂಡ ಹಿರಿಯ ಫಲಾನುಭವಿಗಳು ತಮ್ಮ ಅನುಭವ ಹಂಚಿಕೊಂಡು ಆಸ್ಪತ್ರೆಯಲ್ಲಿನ ಉಚಿತ ಶಸ್ತ್ರಚಿಕಿತ್ಸೆ,ಉಚಿತ ವಸತಿ-ಊಟೋಪಚಾರದ ವ್ಯವಸ್ಥೆಯ ಕುರಿತಾಗಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ವೈದ್ಯರ ಹಾಗೂ ಶುಶ್ರೂಷಕರ ಆತ್ಮೀಯ ಒಡನಾಟದ ಬಗ್ಗೆ ತೃಪ್ತಭಾವನೆ ವ್ಯಕ್ತಪಡಿಸಿ ಆಶೀರ್ವದಿಸಿದರು.

ಲಯನ್ಸ್ ಹ್ಯುಮೆನಿಟೇರಿಯನ್ ಸರ್ವಿಸ್ ಟ್ರಸ್ಟ್ ನ ಚೇರಮನ್ ಡಿ.ಡಿ.ಶೇಟ್ ಸ್ವಾಗತಿಸಿ ಸಂಸ್ಥೆಯ ಕಾರ್ಯಯೋಜನೆಗಳನ್ನು ವಿವರಿಸಿ ಸರ್ವರ ಸಹಕಾರ ಕೋರುತ್ತ,ಕಳೆದ 14 ವರ್ಷಗಳಿಂದಲೂ ತಿಂಗಳಿನ ಪ್ರತಿ ಗುರುವಾರ ಕುಮಟಾ,ಗೋಕರ್ಣ,ಅಂಕೋಲಾ, ಹೊನ್ನಾವರ, ಭಟ್ಕಳ ಗಳಲ್ಲಿ ಜರುಗಿಸುತ್ತ ಬಂದಿರುವ ಉಚಿತ ಶಿಬಿರಗಳ ಕುರಿತಾಗಿ ವಿವರಿಸುತ್ತ ಅರ್ಹ ಬಡ ವೃದ್ಧರು ಈ ಯೋಜನೆಯ ಸದುಪಯೋಗಪಡೆಯಲು ಕರೆ ನೀಡಿದರು.

RELATED ARTICLES  ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ...!

ಟ್ರಸ್ಟಿಗಳಾದ ಡಾ.ಸಿ.ಎಸ್.ವೇರ್ಣೇಕರ, ಡಾ.ಜಿ.ಜಿ.ಹೆಗಡೆ,ಮದನ ನಾಯಕ,ಟ್ರೆಸರರ್ ಎಚ್.ಎನ್‌. ನಾಯ್ಕ ,ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ,ಆಡಳಿತಾಧಿಕಾರಿ ಜಯದೇವ ಬಳಗಂಡಿ ಹಾಗೂ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆಸ್ಪತ್ರೆಯು ಹೊಂದಿದ ಸ್ವಂತ ವಾಹನದಲ್ಲಿ ಈ ಎಲ್ಲ ಫಲಾನುಭವಿಗಳನ್ನು ಗೋಕರ್ಣ ಹಾಗೂ ಅಂಕೋಲಾ ಕ್ಕೆ ಉಚಿತವಾಗಿ ಕರೆದೊಯ್ಯುವ ವ್ಯವಸ್ಥೆ ಕೈಕೊಳ್ಳಲಾಯಿತು.