ಶಿರಸಿ: ರೋಟರಿ ಕ್ಲಬ್, ಇನ್ಹರ್‌ವ್ಹೀಲ್ ಕ್ಲಬ್, ಐಎಂಎ ಶಿರಸಿ, ನಯನ ಫೌಂಡೇಶನ್ ಶಿರಸಿ ಇವರ ಸಹಯೋಗದಲ್ಲಿ ’ಜೀವನ ಮೌಲ್ಯಗಳು ಮತ್ತು ಕಗ್ಗ’ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ನಗರದ ಗಣೇಶ ನೇತ್ರಾಲಯದ ನಯನ ಸಭಾಂಗಣದಲ್ಲಿ ಫೆ.23 ಮಂಗಳವಾರ ಸಂಜೆ 7 ಗಂಟೆಯಿಂದ ಆಯೋಜಿಸಿದೆ.

RELATED ARTICLES  ವಿವಿಧ ಕಾಮಗಾರಿಗಳಿಗೆ 10 ಕೋಟಿ ರೂಪಾಯಿ ಅನುದಾನ ಮಂಜೂರು: ದಿನಕರ ಶೆಟ್ಟಿ

ಖ್ಯಾತ ವಾಗ್ಮಿ, ಬಹುಭಾಷಾ ತಜ್ಞ, ಮಂಕುತಿಮ್ಮನ ಕಗ್ಗದ ಕುರಿತು ವಿಶೇಷ ಅಧ್ಯಯನ ಮಾಡಿ ನಾಡಿನಾದ್ಯಂತ ಮತ್ತು ಹೊರ ರಾಜ್ಯದಲ್ಲಿಯೂ ಕೂಡ ಸುಮಾರು 3000 ಉಪನ್ಯಾಸಗಳು ಶತಕ ಸಪ್ತಾಹಗಳನ್ನು ನಡೆಸಿರುವ ಹಿರಿಯ ಅನುಭವಿ ವಿ.ಜಿ.ಎಸ್ ನಟೇಶ್ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರಿಂದ ಅನೇಕ ಗ್ರಾಮಗಳ ಭೇಟಿ: ಜೋರಾಗಿದೆ ಮತ ಬೇಟೆ.