ಇದೇ ಬರುವ 28/02/2021 ರವಿವಾರ ಮಧ್ಯಾಹ್ನ ಸರಿಯಾಗಿ 3 ಗಂಟೆಯಿಂದ ಹೊನ್ನಾವರ ಹೊಸಾಕುಳಿಯ ಮೇಲಿನಗಂಟಿಗೆ ಶ್ರೀಧರಾನುಗ್ರಹದಲ್ಲಿ “ಭರವಸೆಯ ಬೆನ್ನೇರಿ” ಎಂಬ ವಿಭಿನ್ನ ವಿಶೇಷ ಕಾರ್ಯಕ್ರಮ ಸಾಹಿತಿ ಶಿಕ್ಷಕ ಸಂದೀಪ ಭಟ್ಟ ಇವರಿಂದ ಆಯೋಜಿಸಲ್ಪಟ್ಟಿದೆ. ಸಂದೀಪ ಭಟ್ಟರ 21 ನೇ ಕೃತಿ ನಿತ್ಯಗಾಮಿನಿ ಹಾಗೂ 22 ನೇ ಕೃತಿ ನನಗೊಂದು ಭಾಷಣ ಬರೆದುಕೊಡ್ತೀರಾ ಟೀಚರ್ ಈ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದ್ದು ಆಳ್ವಾಸ್ ಮೂಡುಬಿದರೆಯಲ್ಲಿ ಸಂಗೀತ ಶಿಕ್ಷಕರಾಗಿರುವ ಶ್ರೀಯುತ ಚಿನ್ಮಯ ಭಟ್ಟ ಇವರ ಸಂಯೋಜನೆಯಲ್ಲಿ ಮಾಘ ಗಾನೋತ್ಸವ ಸುಸಂಪನ್ನಗೊಳ್ಳಲಿಕ್ಕಿದೆ.
ಗಣ್ಯಾತಿಗಣ್ಯರು, ವಾಗ್ಮಿಗಳು, ಕಲಾವಿದರು, ಆತ್ಮೀಯರು, ಹಿತೈಶಿಗಳು ಕಾರ್ಯಕ್ರಮದಲ್ಲಿ ಮೇಳೈಸಲಿದ್ದು ಸಮಯಪಾಲಿತ ಹಾಗೂ ಶಿಸ್ತುಬದ್ಧ ಕಾರ್ಯಕ್ರಮವೊಂದರ ನಿರೀಕ್ಷೆ ಸಹೃದಯಿಗಳಲ್ಲಿದೆ.
ಖ್ಯಾತ ಸಂಗೀತ ಕಲಾವಿದರ ಬಹಳ ಅಪರೂಪದ ಗಾಯನ ರಸಾಯನ, ಅರಳು ಪ್ರತಿಭೆಯ ಚಂಡೆಯ ವಾದನ, ಗಿಟಾರ್ ಹೀಗೆ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ಸಾಕ್ಷಿಯಾಗಲಿದೆ. ಜಿಲ್ಲೆಯ ಅದ್ಭುತ ವಾಗ್ಮಿಗಳು ಒಂದೇ ವೇದಿಕೆಯಲ್ಲಿ ಕಾಣಸಿಗುತ್ತಿರುವುದು ಮತ್ತೊಂದು ಸುಯೋಗ.