ಕುಮಟಾ: ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ಮುಖಂಡ ಸೂರಜ ನಾಯ್ಕ ಸೋನಿಯವರ ಹುಟ್ಟು ಹಬ್ಬದ ನಿಮಿತ್ತ ಸೂರಜ ನಾಯ್ಕ ಸೋನಿ ಗೆಳೆಯರ ಬಳಗದ ವತಿಯಿಂದ ಫೆ.27 ರಂದು ಶನಿವಾರ ಪಟ್ಟಣದ ಗಿಬ್ ಪ್ರೌಢಶಾಲೆಯ ರಾಜೇಂದ್ರಪ್ರಸಾದ ಸಭಾಭವನದಲ್ಲಿ ಜಿಲ್ಲೆಯ ಯುವ ಅಭ್ಯರ್ಥಿಗಳಿಗಾಗಿ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದ್ದು ಅಭೂತಪೂರ್ವ ಯಶಸ್ಸು ಕಂಡಿದೆ. ಅನೇಕ ಕಂಪನಿಗಳು ಹಾಗೂ ಸ್ಥಳೀಯ ಕಂಪನಿಗಳು ಭಾಗವಹಿಸಿದ್ದವು. ಸಾವಿರಾರು ಜನರು ಇದರ ಸದುಪಯೋಗ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಗೆಳೆಯರ ಬಳಗದ ಸದಸ್ಯರು ಪ್ರತಿ ವರ್ಷವೂ ಸಹ ಸೋನಿಯವರ ಹುಟ್ಟು ಹಬ್ಬದ ನಿಮಿತ್ತ ಬೇರೆಬೇರೆ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದೆವು. ಆದರೆ ಕೊರೊನಾ ಬಳಿಕ ಕೆಲವು ಕಾರ್ಯಕ್ರಮಗಳಿಗೆ ತಡೆಯುಂಟಾಗಿದ್ದವು. ಸದ್ಯ ಕೊರೊನಾದಿಂದ ಹೊರಬಂದ ಕಾರಣ ಕಾರ್ಯಕ್ರಮಗಳು ಪುನಃ ಪ್ರಾರಂಭಗೊಂಡಿದೆ. ಅಲ್ಲದೇ, ಜನ್ಮ ದಿನದ ನಿಮಿತ್ತ ಇದೇ ಮೊದಲ ಬಾರಿಗೆ ಕುಮಟಾದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿರುವುದು ಸಂತಸ ತಂದಿದೆ ಎಂದರು.

RELATED ARTICLES  ಕಲಾವಿದರಿಗೆ ಸರಕಾರದಿಂದ ವಿಶೇಷ ಸವಲತ್ತುಗಳು ಸಿಗಬೇಕು : ಗಣಪತಿ ಉಳ್ವೇಕರ

ಜಿಲ್ಲೆಯಲ್ಲಿ ಸಾಕಷ್ಟು ಯುವಕರು ವಿವಿಧ ಪದವಿ ಹೊಂದಿ, ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಅಂತಹ ಯುವಕರಿಗೆ ಉತ್ತಮ ವೇದಿಕೆ ಒದಗಿಸುವ ಮೂಲಕ ನೆರವಾಗುವ ಉದ್ದೇಶದಿಂದ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. 7 ನೆಯ ತರಗತಿ ಹಾಗೂ ನಂತರದ ಯಾವುದೇ ಪದವಿಯ ಪಾಸ್ ಅಥವಾ ಫೇಲ್ ಆದ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಜೀವನಕ್ಕೆ ದಾರಿ ಮಾಡಿಕೊಂಡಿದ್ದಾರೆ ಎಂದು ಜೆ.ಡಿ ಎಸ್ ಮುಖಂಡ ಸೂರಜ ನಾಯ್ಕ ಸೋನಿ ತಿಳಿಸಿದರು. ಸೂರಜ ನಾಯ್ಕ ಸೋನಿ ಗೆಳೆಯರ ಬಳಗವು ಬಡವರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಜಾತಿ, ಮತ, ಭೇದವಿಲ್ಲದೇ ನಿರಂತರವಾಗಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ನನ್ನ ಕಷ್ಟ ಹಾಗೂ ಸುಖದಲ್ಲಿ ಭಾಗಿಯಾಗಿ, ನನ್ನನ್ನು ರಾಜಕೀಯವಾಗಿ ಯುವಕರ ನಾಯಕ ಎಂದು ನನ್ನ ಬೆನ್ನಿಗೆ ನಿಂತವರು ನಮ್ಮ ಯುವಕರು. ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಅಥವಾ ಉತ್ತಮ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ಯುವಕರು ಇದರ ಸದುಪಯೋಗ ಪಡೆದುಕೊಂಡ ಸಂತ್ರಪ್ತಿ ನನಗಿದೆ ಎಂದರು.

RELATED ARTICLES  ಶಿರಸಿಯಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಜಾತ್ರಾ ಸೇವಾ ಕಾರ್ಯಕರ್ತರಿಗೆ ಸಂದಿತು ಅಭಿನಂದನೆ