ಕುಮಟಾ: ಇಂದು ಶಿಕ್ಷಣಕ್ಕೆ ಎಲ್ಲ ರೀತಿಯ ಸೌಲಭ್ಯಗಳು ಲಭ್ಯವಿದ್ದು, ಕಲಿಕಾ ಕ್ರಿಯೆಯಿಂದ ಯಾರೂ ಹಿಂದುಳಿಯುವಂತಿಲ್ಲ. ಕಲಿಕೆಗೆ ಎಲ್ಲ ತೆರನಾದ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ ಎಂದು ಅಭಿಯಂತರ ಲಕ್ಷ್ಮೀಕಾಂತ ರಾವುತ್ಕರ ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ಗಾವಡಿ ಸಮಜೋನ್ನತಿ ಶಿಕ್ಷಣ ಸಂಘದ ಆಶ್ರಯದಲ್ಲಿ ಅಳ್ವೇಕೋಡಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಮಾಜದ ಹಿರಿಯರಾದ ಆರ್.ವಿ.ಗಾವಡಿ ಬಹುಮಾನ ವಿತರಿಸಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯೂಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ಮೊದಲ ಮೂರು ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪುರಸ್ಕರಿಸಲಾಯಿತಲ್ಲದೇ, ಸಮಾಜದ ವಿದ್ಯಾರ್ಥಿಗಳಿಗೆ ಪಟ್ಟಿ ವಿತರಿಸಲಾಯಿತು.
ಬಾಲಕೃಷ್ಣ ಕೊರಗಾಂವಕರ ಕಾರ್ಯಕ್ರಮದ ಅಧ್ಯ್ಷತೆಯನ್ನು ವಹಿಸಿದ್ದರು. ವಿಷ್ಣು ಗಾವಡಿ ಸ್ವಾಗತಿಸಿದರೆ, ಪ್ರಕಾಶ ಗಾವಡಿ ನಿರೂಪಸಿದರು. ಪ್ರಶಾಂತ ಗಾವಡಿ ವಂದಿಸಿದರು. ಉದಯಕುಮಾರ ಗಾವಡಿ, ರೋಹಿದಾಸ ಗಾವಡಿ, ದತ್ತಾ ಗಾವಡಿ, ದೇವಪ್ಪ ಗಾವಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.