ಕುಮಟಾ: ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ದಿನದ ಕುರಿತಾಗಿ ಮಾಹಿತಿ ನೀಡುವ ಕಾರ್ಯಕ್ರಮ ಒಂದೆಡೆಯಾದರೆ, ಇದರ ಜೊತೆಗೆ ವಿದ್ಯಾರ್ಥಿಗಳು ನಡೆಸಿದ ವಿಜ್ಞಾನ ವಸ್ತು ಪ್ರದರ್ಶನ ಗಮನ ಎಳೆಯಿತು.
ಸರ್ ಸಿ.ವಿ.ರಾಮನ್ ಅವರು ರಾಮನ್ ಎಫೆಕ್ಟ ಅನ್ನು ಜಗತ್ತಿಗೆ ಪರಿಚಯಿಸಿದ ಫೆsÀ.28ನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ. ಈ ದಿನದ ವಿಶೇಷತೆಗಳ ಬಗ್ಗೆ ವಿಜ್ಞಾನ ಶಿಕ್ಷಕಿ ಉಷಾ ಭಟ್ಟ ಪರಿಪೂರ್ಣ ಮಾಹಿತಿ ನೀಡಿದರು. 6ನೇ ವರ್ಗದ ವಿದ್ಯಾರ್ಥಿಗಳಾದ ಕೃತಿಕಾ ಭಟ್ಟ, ದೀಪ್ತಿ ಪಂಡಿತ, ರಾಹುಲ್ ಭಟ್ಟ ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಂಡ ವಿಜ್ಞಾನಿಗಳನ್ನು ಪರಿಚಯಿಸಿದರು.
ಸರಳ ಸಮಾಂಭರದಲ್ಲಿ ಶೈಕ್ಷಣ ಕ ಸಲಹೆಗಾರರಾದ ಆರ್.ಎಚ್ ದೇಶಭಂಡಾರಿ, ಮುಖ್ಯಶಿಕ್ಷಕಿ ಸುಜಾತಾ ನಾಯ್ಕ, ಬಾಲಮಂದಿರದ ಮುಖ್ಯಶಿಕ್ಷಕಿ ಸಾವಿತ್ರಿ ಹೆಗಡೆ ,ಶಿಕ್ಷಕಿ ವಿನಯಾ ಶಾನಭಾಗ ಹಾಜರಿದ್ದರು. ಸುವರ್ಣಾ ಮಯ್ಯರ್ ರಚಿತ ಲಕ್ಷ್ಮಿ ಹೆಗಡೆ ರಾಗ ಸಂಯೋಜಿಸಿದ ವಿಜ್ಷಾನದ ಕುರಿತಾದ ಗೀತೆಯನ್ನು ಹಾಡಲಾಯಿತು. ಪ್ರಜ್ಞಾ ನಾಯ್ಕ ಸರ್ವರನ್ನು ಸ್ವಾಗತಿಸಿದರು.ಮಹೇಶ್ವರಿ ನಾಯ್ಕ ನಿರೂಪಿಸಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಪ್ರದರ್ಶನ ನೀಡಿದರು. ಉಳಿದ ವಿದ್ಯಾರ್ಥಿಗಳು ನಿಯಮಿತ ಅಂತರ ಕಾಪಾಡಿಕೊಂಡು ವಿಜ್ಞಾನ ಮಾದರಿಗಳನ್ನು ವೀಕ್ಷಿಸಿದರು.