ಕುಮಟಾ: ಇಲ್ಲಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಲ್ಲೀಕೇರಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಗಣ ತ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಿಸಲಾಯಿತು. ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿಶ್ರಾಂತ ಮುಖ್ಯಾಧ್ಯಾಪಕ ಎನ್.ಆರ್.ಗಜು ಗಿಡಕ್ಕೆ ನೀರುಣ ಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳಲ್ಲಡಗಿರುವ ಒಬ್ಬ ವಿಜ್ಞಾನಿ, ಒಬ್ಬ ತಂತ್ರಜ್ಞ ಹಾಗೂ ಒಬ್ಬ ಅಭಿಯಂತರ ಲಕ್ಷಣಗಳನ್ನು ಗುರುತಿಸಿ, ಹೊರಹಾಕುವ ಪ್ರಯತ್ನಕ್ಕೆ ನೀರೆರುದು ಪೋಷಿಸುವ ಆರಂಭಿಕ ಜವಾಬ್ದಾರಿ ಶಿಕ್ಷಕರಲ್ಲಿದೆ ಎಂದರಲ್ಲದೇ ವಿದ್ಯಾರ್ಥಿಗಳ ಕೌತುಕ ಪ್ರಶ್ನೆಗಳನ್ನು ಅಲಕ್ಷಿಸಿದೇ ಜ್ಞಾನ, ತಿಳುವಳಿಕೆ, ಕೌಶಲ್ಯಗಳಿಂದ ಸಮಂಜಸ ಉತ್ತರ ನೀಡುವಲ್ಲಿ ಸಹಕರಿಸಿದರೆ ಜಗತ್ತಿಗೆ ಅಸಾಧಾರಣ ಪ್ರತಿಭೆಯ ಕೊಡುಗೆ ನೀಡಬಹುದೆಂದು ಅಭಿಪ್ರಾಯಪಟ್ಟರು.
ಜಗತ್ತೇ ಆರಾಧಿಸುವಂತೆ ಬೆಳಗಿದ ಮಾನ್ಯರ ಸ್ಮರಣೆಯಿಂದ ಮಕ್ಕಳಲ್ಲಿ ಸಕಾರಾತ್ಮಕ ಭಾವನೆ ಅರಳುತ್ತದೆ ಎಂದು ಹಿರಿಯ ಶಿಕ್ಷಕಿ ಮಂಜುಳಾ ಕುಮಟಾಕರ ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು. ಪ್ರಾರಂಭದಲ್ಲಿ ಇಕೋ ಕ್ಲಬ್ ಸಂಚಾಲಕ ಶಿಕ್ಷಕ ಬೀರದಾಸ ಗುನಗ ಸ್ವಾಗತಿಸಿದರೆ ಪುಷ್ಪಾ ನಾಯ್ಕ ವಂದಿಸಿದರು.
ವಿಜ್ಞಾನಿ ಸರ್ ಸಿ.ವಿ.ರಾಮನ್ ಹಾಗೂ ಗಣ ತಜ್ಞ ಶ್ರೀನಿವಾಸ ರಾಮಾನುಜನ್‍ರ ಜೀವನ ಚರಿತ್ರೆಯ ಬಗ್ಗೆ ವಿದ್ಯಾರ್ಥಿಗಳಿಗೆ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ಶ್ರೀಲಕ್ಷ್ಮೀ ನಾಯ್ಕ, ಲಕ್ಷ್ಮೀ ನಾಯ್ಕ, ಅನಮ್ ಕೆ.ಖಾಜಿ, ನಂದಿನಿ ಹೂಗಾರ, ನಿಯತಿ ನಾಯಕ, ನವ್ಯಾ ಹೆಬ್ಬಾರ, ರಾಜು ಹರಿಕಾಂತ ಬಹುಮಾನ ವಿತರಿಸಲಾಯಿತು.