ಕುಮಟಾ: ಕುಮಟಾದಲ್ಲಿ ಇಂದು ಎಕ್ಸ್‍ಕ್ಲೂಸಿವ್ ಬ್ರ್ಯಾಂಡ್ ಮಳಿಗೆ (ಇಬಿಓ) ಸ್ಥಾಪನೆಯೊಂದಿಗೆ ಗೋದ್ರೇಜ್ ಅಪ್ಲಯನ್ಸಸ್‍ನ ವಹಿವಾಟು ಘಟಕವನ್ನು ಕರ್ನಾಟಕದಲ್ಲಿ ಮತ್ತಷ್ಟು ಬಲಪಡಿಸಿದೆ. ಈ ಮಳಿಗೆ ಆರಂಭದೊಂದಿಗೆ ಕರ್ನಾಟಕ ರಾಜ್ಯದಲ್ಲಿ ಇಬಿಓ ಸಂಖ್ಯೆ 11ಕ್ಕೇರಿದಂತಾಗಿದೆ.
ಪೂರೈಕೆ ಸರಣಿಯನ್ನು ಮತ್ತಷ್ಟು ಬಲಪಡಿಸುವ ಮತ್ತು ಕುಮಟಾ ಮಾರುಕಟ್ಟೆಯಲ್ಲಿ ತನ್ನ ಗ್ರಾಹಕರಿಗೆ ಮುಂದಿನ ಸ್ತರದ ಅನುಭವವನ್ನು ಸೃಷ್ಟಿಸುವ ಉದ್ದೇಶದಿಂದ ಗೋದ್ರೇಜ್ ಅಪ್ಲೈಯನ್ಸಸ್ ಈ ಎಕ್ಸ್‍ಕ್ಲೂಸಿವ್ ಬ್ರ್ಯಾಂಡ್ ಮಳಿಗೆಯನ್ನು ಆರಂಭಿಸಿದೆ. ಇದು 1400 ಚದರ ಅಡಿ ವಿಸ್ತೀರ್ಣವಿದ್ದು, ಚಾನಲ್ ಪಾಲುದಾರ ಸಂಸ್ಥೆಯಾದ ತರಂಗ ಎಲೆಕ್ಟ್ರಾನಿಕ್ಸ್ ಸಹಯೋಗದಲ್ಲಿ ಇದನ್ನು ಆರಂಭಿಸಲಾಗಿದೆ. ಇಬಿಓ ಕುಮಟಾ ನಗರದ ಆಯಕಟ್ಟಿನ ಪ್ರದೇಶವೆನಿಸಿದ ನೆಲ್ಲಿಕೇರಿ ಅಂಚೆ ಕಚೇರಿ ಬಳಿಯ ಶ್ರೀ ಗಜಾನನ ಕಾಂಪ್ಲೆಕ್ಸ್‍ನಲ್ಲಿ ಇರುತ್ತದೆ.
ಎಕ್ಸ್‍ಕ್ಲೂಸಿವ್ ಬ್ರ್ಯಾಂಡ್ ಮಳಿಗೆಯನ್ನು ಗೋದ್ರೇಜ್ ಅಪ್ಲಯನ್ಸಸ್‍ನ ದಕ್ಷಿಣ- ಕರ್ನಾಟಕ ವಿಭಾಗೀಯ ವಹಿವಾಟು ಮುಖ್ಯಸ್ಥ ವಿ.ವೆಂಕಟರಮಣನ್ ಮತ್ತು ಶಿರಾಲಿ ಶ್ರೀ ಮಾರುತಿ ಕೋ ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಅಧ್ಯಕ್ಷ ಅಶೋಕ್ ಪೈ ಅವರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ತರಂಗ ಎಲೆಕ್ಟ್ರಾನಿಕ್ಸ್‍ನ ಮಾಲೀಕ ಶ್ರೀಕಾಂತ್ ಭಟ್ ಮಾತನಾಡಿದರು.ಗೋದ್ರೇಜ್ ಬ್ರಾಂಡ್‍ನ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಏರ್ ಕಂಡೀಷನರ್, ಏರ್ ಕೂಲರ್, ಚೆಸ್ಟ್ ಫ್ರೀಜರ್‍ಗಳು, ಮೈಕ್ರೋವೇವ್ ಓವನ್, ಥರ್ಮೋಎಲೆಕ್ಟ್ರಿಕ್ ತಂತ್ರಜ್ಞಾನ ಚಾಲಿತ ಗೋದ್ರೇಜ್ ಕ್ರೂಬ್ ಮತ್ತು ಯುವಿ-ಸಿ ತಂತ್ರಜ್ಞಾನ ಆಧರಿತ ಗೋದ್ರೇಜ್ ವಿರೋಶೀಲ್ಡ್ ಸೇರಿದಂತೆ ವೈವಿಧ್ಯಮ ಶ್ರೇಣಿಯ ಅಪ್ಲೈಯನ್ಸಸ್‍ಗಳು ಲಭ್ಯವಿದ್ದು, ಗ್ರಾಹಕರಿಗೆ ಆರಂಭಿಕ ವಿಶೇಷ ಕೊಡುಗೆಗಳಿವೆ ಎಂದು ಪ್ರಕಟಣೆ ಹೇಳಿದೆ. ಈ ಈ ಸಂದರ್ಭದಲ್ಲಿ ತರಂಗ ಇಲೆಕ್ಟ್ರಾನಿಕ್ ಮಾಲಿಕರಾದ ಶ್ರೀಕಾಂತ ಭಟ್ಟ ಹಾಗೂ ವಸಂತ ಭಟ್ಟ ಹಾಗೂ ಗ್ರಾಹಕರು ಹಾಜರಿದ್ದರು.