ಹೊನ್ನಾವರ: ಇಲ್ಲಿನ ಅಗ್ರಹಾರದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನ ಮೂರ್ತಿಗೆ ಅಲಂಕರಿಸಿದ್ದ ಬಂಗಾರದ ಕವಚ ಹಾಗೂ ಆಭರಣ ಸೇರಿ ಸುಮಾರು 4 ಲಕ್ಷ ಮೌಲ್ಯದ ಒಡವೆಗಳ ಕಳವು ಆಗಿರುವುದಾಗಿ ದೇವಳದ ಗಣಪತಿ ಸಭಾಹಿತ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

RELATED ARTICLES  ಅನಂತ ಕುಮಾರ್ ಹೆಗಡೆ ವಿರುದ್ಧ ಗುಡುಗಿದ ಸೂರಜ್ ನಾಯ್ಕ ಸೋನಿ.!!

ಗಣಪತಿ ಮಂದಿರದ ಗರ್ಭಗುಡಿಯ ಎದುರಿನ ಬಾಗಿಲಿಗೆ ಹಾಕಿದ್ದ ಚಿಲಕವನ್ನು ತೆಗೆದು ಒಳಹೊಕ್ಕ ಕಳ್ಳರು ಗರ್ಭಗುಡಿಯಲ್ಲಿನ ಹರಿವಾಣದಲ್ಲಿಟ್ಟಿದ್ದ ಮುಖಕವಚ, ಹೊಟ್ಟೆಯ ಕವಚ, ಕಾಲಿನ ಕವಚ, ಸೇರಿದಂತೆ ಸುಮಾರು 100 ಗ್ರಾಂ ತೂಕದ ಬಂಗಾರದ ಆಭರಣಗಳು ಸೇರಿ ಸುಮಾರು 4ಲಕ್ಷ ಮೌಲ್ಯದ ಒಡವೆಗಳನ್ನು ಕಳುವು ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್‌ಐ ಸಾವಿತ್ರಿ ನಾಯಕ ತನಿಖೆ ನಡೆಸಿದ್ದಾರೆ.

RELATED ARTICLES  ಹೊನ್ನಾವರ ಮಂಡಲದ ವಿವಿಧೆಡೆ ಕಾರ್ಯಕರ್ತರ ಸಭೆ ನಡೆಸಿದ ದಿನಕರ ಶೆಟ್ಟಿ