ಪುನರ್ವಸತಿ ಕೇಂದ್ರ ಮತ್ತು ವಿಶೇಷ ಮಕ್ಕಳಿಗಾಗಿ ಮನೆ 2009 ರಲ್ಲಿ ಪ್ರಾರಂಭವಾದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಅರ್ಚನಾ ಟ್ರಸ್ಟ್ ಜಂಟಿಯಾಗಿ ನಡೆಸುತ್ತಿರುವ ಆಸರೆ ಯಲ್ಲಿ 38 ವಸತಿ ಮತ್ತು 8 ದಿನದ ಆರೈಕೆ ವಿದ್ಯಾರ್ಥಿಗಳಿದ್ದು, ಇಂದು ಆಸರೆಗೆ ವಿಕ್ಡೋರಿಯಾ ಫುಟ್ ಬಾಲ್ ಅಕಾಡೆಮಿಯಿಂದ ವೀಲ್ ಚೇರ್ ನೀಡುವ ಕಾರ್ಯಕ್ರಮ ನಡೆಯಿತು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

RELATED ARTICLES  ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ ಯುವಪಡೆ.

ಮಹೇ ಸಾಮಾನ್ಯ ಸೇವೆ ಉಪನಿರ್ದೇಶಕ ಕಾರ್ನಲ್ ಉಮಕಾಂತ್ ಸಿಂಗ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.ಇದೇ ವೇಳೆ ಫುಟ್ ಬಾಲ್ ಅಕಾಡೆಮಿಯ ಸಂಸ್ಥಾಪಕರು,ಉತ್ಸಾಹಿ ತರಬೇತುದಾರರು ಕ್ಲೈವ್ ನೊಲನ್ ಮಾಸ್ಕರೇನಸ್ ಮತ್ತು ಮಿಲನಾ ಅವರು ವೀಲ್ ಚೇರ್ ನೀಡಿದ ನಂತರ ಆಸರೆ ಟ್ರಸ್ಟ್ ನ ಮಕ್ಕಳಿಗೆ ಉಚಿತ ಫುಟ್ ಬಾಲ್ ತರಬೇತಿ ನೀಡುವುದಾಗಿ ಕಾರ್ಯಕ್ರಮದಲ್ಲಿ ಹೇಳಿದರು.ಮಕ್ಕಳಿಗಾಗಿ ಏರ್ಪಡಿಸಿದ್ದ ಮನರಂಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ಎಲ್ಲರ ಜೊತೆ ಬೆರೆತು ಖುಷಿ ಪಟ್ಟರು. ಮಾಹೆಯ ಎಸ್ಟೇಟ್ ಆಫೀಸರ್ ಜೈವಿಠಲ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES  ಕೋಟಿ ಕೋಟಿ ಹಣ ಹಾಕಿ ಮಾಡುತ್ತಿರುವ ಕಾಮಗಾರಿ ಅಸಮರ್ಪಕ : ಭಾಸ್ಕರ ಪಟಗಾರ ಆರೋಪ : ಸ್ಥಳಕ್ಕೆ ಭೇಟಿ.

ಆಸರೆ ಕಳೆದ ವರ್ಷ ರಾಜ್ಯದ ಅತ್ಯುತ್ತಮ ಸಂಸ್ಥೆ ಎಂಬ ಪ್ರಶಸ್ತಿಗೆ ಪಾತ್ರವಾಗಿತ್ತು.