ಹೊನ್ನಾವರ : ಪಟ್ಟಣದ ವೆಂಕ್ರಟಮಣ ದೇವರ ರಥೋತ್ಸವದ ಹಿನ್ನಲೆಯಲ್ಲಿ ರಥವು ಸಂಚರಿಸುವ ಮಾರ್ಗಗಳಿಗೆ ತುರ್ತಾಗಿ ರಸ್ತೆ ಕಾಮಗಾರಿ ನಡೆಸುವ ಮೂಲಕ ಶಾಸಕ ದಿನಕರ ಶೆಟ್ಟಿಯವರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಪಟ್ಟಣದ ರಸ್ತೆಗಳಿಗೆ ಶಾಸಕರಾದ ಬಳಿಕ ಕಾಂಕ್ರಿಟಿಕರಣ ಮಾಡುವ ಮೂಲಕ ಬಹುವರ್ಷದ ಹೊಂಡಮಯ ರಸ್ತೆಗೆ ಮುಕ್ತಿ ನೀಡಿದ್ದ ಶಾಸಕರು, ಅಧಿಕಾರ ವಹಿಸಿಕೊಂಡ ಬಳಿಕ ಪಟ್ಟಣ ವ್ಯಾಪ್ತಿಯ ಎಮ್ಮೆಪೈಲ್ ರಸ್ತೆ, ದುರ್ಗಾಕೇರಿ ರಸ್ತೆ, ಶರಾವತಿ ವೃತ್ತದಿಂದ ಬಸ್ ನಿಲ್ದಾಣ ರಸ್ತೆ, ಪ್ರಭಾತನಗರದ ಕೆ.ಎಚ್.ಬಿ ರಸ್ತೆಗೆ ಕಾಂಕ್ರಿಟಿಕರಣ ಮಾಡುವ ಮೂಲಕ ಸಮಸ್ಯೆ ಬಗೆಹರಿಸಿದ್ದರು.

RELATED ARTICLES  ಟ್ಯಾಂಕರ್ ಪಲ್ಟಿ : ಕೆಲಕಾಲ ಗೊಂದಲದ ವಾತಾವರಣ.

ಇದೀಗ ರಥ ಸಂಚರಿಸುವ ರಥ ಬೀದಿ ರಸ್ತೆ ಹೊಂಡಮಯವಾಗಿರುದರಿಂದ ಈ ರಸ್ತೆಗೆ ಡಾಂಬರಿಕರಣಕ್ಕೆ ಕೂಡಲೇ ಚಾಲನೆ ನೀಡಿರುವುದು ಪಟ್ಟಣ ನಿವಾಸಿಗಳಲ್ಲಿ ಸಂತಸ ಮೂಡಿದೆ. ಈ ಸಂದರ್ಭದಲ್ಲಿ ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ, ಸೇರದಂತೆ ಆಡಳಿತ ಮಂಡಳಿ, ಸೇರಿದಂತೆ ವಿವಿಧ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

RELATED ARTICLES  ಮಿರ್ಜಾನಿನಲ್ಲಿ ಕಾರು ಬೈಕ್ ಡಿಕ್ಕಿ.

ರಥೊತ್ಸವದ ಹಿನ್ನಲೆಯಲ್ಲಿ ಶಾಸಕರಲ್ಲಿ ಈ ಬಗ್ಗೆ ಮನವಿ ಮಾಡಿದಾಗ ಕೂಡಲೇ ಸ್ಪಂದಿಸಿ ಡಾಂಬರಿಕರಣಕ್ಕೆ ಕೇವಲ ಭರವಸೆ ನೀಡದೆ ರಥ ಸಂಚರಿಸುವ ಮಾರ್ಗದ ಸಂಪೂರ್ಣ ಡಾಂಬರಿಕರಣಕ್ಕೆ ಇಂದೆ ಚಾಲನೆ ನೀಡಿರುವುದು ಸಂತಸ ಮೂಡಿಸಿದೆ ಎಂದು ಸಾರ್ವಜನಿಕರು ವಿವರಿಸಿದ್ದಾರೆ.