ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿ ಇಲ್ಲಿ ಅಮೂಲ್ಯ ಸಾಕ್ಷರತಾ ಕೇಂದ್ರ ಶಿರಸಿ ಇವರ ವತಿಯಿಂದ ಉಪನ್ಯಾಸಕರಾಗಿ ಶ್ರೀ ಪ್ರಭಾಕರ ಎಸ್ ಶಿರಾಲಿ,ನಿವೃತ್ತ ಸೀನಿಯರ್ ಮ್ಯಾನೇಜರ್,ಕೆನರಾ ಬ್ಯಾಂಕ್ ಇವರು ಆರ್ ಬಿ ಐ ಸ್ಥಾಪನೆ,ನೋಟ್ ಪ್ರಿಂಟ್ ಮಾಡುವ 5 ಕೇಂದ್ರಗಳು,ಡೆಬಿಟ್ ಕಾರ್ಡ,ಎಟಿಮ್ ಕಾರ್ಡಗಳ ಮಹತ್ವ ಹಾಗೂ ಅನುಪಾಲಿಸಬೇಕಾದ ಮಾರ್ಗಸೂಚಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಬ್ಯಾಂಕ್‍ಗಳ ವಿಧಗಳು,ಬ್ಯಾಂಕ್ ಗಳಲ್ಲಿ ತೆರೆಯಬಹುದಾದ ವಿವಿಧ ಖಾತೆಗಳು,ಬ್ಯಾಂಕ್ ನಲ್ಲಿ ಖಾತೆ ತೆರೆಯುವ ವಿದಾನಗಳು,ಬ್ಯಾಂಕ್ ಖಾತೆ ತೆರಯುವ ಅನುಕೂಲತೆಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ಒಳಗೊಂಡ ಉಪನ್ಯಾಸವನ್ನು ನೀಡಿದರು.

RELATED ARTICLES  ಕುಮಟಾ : ಬೆಂಕಿ ಅವಘಡ : ಬೆಳೆ ಬೆಂಕಿಗೆ ಆಹುತಿ.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ಮಂಗಳಗೌರಿ ನೆಜ್ಜೂರು,ಶಾಖಾ ವ್ಯವಸ್ಥಾಪಕರು,ಕೆನರಾ ಬ್ಯಾಂಕ್ ಜಾನ್ಮನೆ ಇವರು ಮಾತನಾಡಿ ಇಂದು ಬ್ಯಾಂಕ ಖಾತೆ ಎಲ್ಲರಿಗೂ ಅಂದರೆ ನರೇಗಾ ಕೂಲಿ ಕಾರ್ಮಿಕರಿಗೆ,ಸ್ತ್ರೀ ಸಂಘಗಳಿಗೆ, ವಿದ್ಯಾರ್ಥಿಗಳ ವಿವಿಧ ಸ್ಕಾಲರ್‍ಶಿಪ್‍ಗಳಿಗೆ,ಶೈಕ್ಷಣ ಕ ಸಾಲಕ್ಕೆ ಬ್ಯಾಂಕ್ ಖಾತೆ ತೆರೆಯುವುದು ಅನಿವಾರ್ಯವಾಗಿದೆ. ಶೇಖಡಾ 70%ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಸಮಾನ ಅವಕಾಶ ನೀಡಿ ಯಾವುದೇ ಸೆಕ್ಯುರಿಟಿ ಇಲ್ಲದೇ ಬ್ಯಾಂಕ್ ಗಳು ಲೋನ್ ಕೊಡುತ್ತ್ವೆ.ಪ್ರಧಾನ ಮಂತ್ರಿ ಜನಧನ ಯೋಜನೆ ಮೂಲಕ ಝೀರೋ ಬ್ಯಾಲೆನ್ಸ ನಲ್ಲಿ ಖಾತೆ ತೆರೆಯಲು ಎಲ್ಲ ವರ್ಗದವರಿಗೂ ಬ್ಯಾಂಕ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದನ್ನು ತಮ್ಮ ಪಾಲಕ ಪೋಷಕರಿಗೆ, ನೆರೆ-ಹೊರೆಯವರಿಗೆ ವಿದ್ಯಾರ್ಥಿಗಳಾದ ತಾವು ಮನವರಿಕೆ ಮಾಡಿಕೊಡಬೇಕೆಂದು ಕಿವಿಮಾತು ಹೇಳಿದರು. ಮುಖ್ಯಾಧ್ಯಾಪಕರಾದ ಶ್ರೀ ಎಮ್ ಜಿ ಹೆಗಡೆ ಸ್ವಾಗತಿಸಿದರು, ಶ್ರೀ ಆರ್ ಕೆ ಚವ್ಹಾಣ ವಂದಿಸಿದರು.ಶ್ರೀ ನಾರಾಯಣ ದೈಮನೆ ನಿರೂಪಿಸಿದರು.

RELATED ARTICLES  ಸಮಾಜಕ್ಕೆ ಅಮೃತ ನೀಡುವ ಪಣ ತೊಡಿ: ಕಾರ್ಯಕರ್ತರಿಗೆ ರಾಘವೇಶ್ವರ ಶ್ರೀ ಸಲಹೆ