ಶಿರಸಿ: ಇಲ್ಲಿನ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ನಗರ ಪೊಲೀಸ್ ಠಾಣೆಯ ಪೋಲಿಸರು ಇಂದು ಆರೋಪಿ ಶಾಂತಾರಾಂ ಗಜಾನನ ವೆರ್ಣೇಕರ್ ಎಂಬಾತನನ್ನು ಬಂಧಿಸಿದ್ದಾರೆ.

ಶ್ರೀ ಮಾರಿಕಾಂಬಾ ದೇವಸ್ಥಾನದ ಭದ್ರತೆ ದೃಷ್ಟಿಯಿಂದ ದೇವಸ್ಥಾನದ ಪ್ರವೇಶ ದ್ವಾರ ಹಾಗೂ ನಿರ್ಗಮನ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸುವ ಕುರಿತು ದೇವಸ್ಥಾನದ ಆಡಳಿತ ಮಂಡಳಿಯವರು ಟೆಂಡರ್ ಕರೆದಿದ್ದು ಈ ವಿಚಾರದಲ್ಲಿ ಅಂಕೋಲ ತಾಲೂಕಿನ ಶಾಂತಾರಾಂ ಗಜಾನನ ವೆರ್ಣೆಕರ್ ಎನ್ನುವ ವ್ಯಕ್ತಿಯ ಮಾಲಕತ್ವದ ‘ಕುಸುಮ ಇನ್ಫೋಟೆಕ್ ಸಂಸ್ಥೆ ಮೆಟಲ್ ಡಿಟೆಕ್ಟರ್ ಅಳವಡಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದು ಈ ಬಗ್ಗೆ ದೇವಸ್ಥಾನದಿಂದ 1,81,164 ಮೊತ್ತವನ್ನು ಚೆಕ್ ಮೂಲಕ ಪಡೆದುಕೊಂಡಿದ್ದು ಟೆಂಡರ್ ಒಪ್ಪಂದದಂತೆ ಮೆಟಲ್ ಡಿಟೆಕ್ಟರ್ ಅಳವಡಿಸದೇ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ನಂಬಿಕೆ ದ್ರೋಹ ಎಸಗಿರುತ್ತಾನೆ ಎಂದು ಈತನ ಮೇಲೆ ದೇವಸ್ಥಾನದ ವತಿಯಿಂದ ದೂರು ನೀಡಲಾಗಿತ್ತು.

RELATED ARTICLES  ಕುಮಟಾ ರೈಲ್ವೆ ನಿಲ್ದಾಣಕ್ಕೆ ಶಾಸಕರ ಭೇಟಿ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ದಿನಕರ ಶೆಟ್ಟಿ

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಶಿರಸಿ ನಗರ ಠಾಣೆಯ ಪೋಲಿಸರು ತನಿಖೆ ಕೈಗೊಂಡಿದ್ದರು. ಡಿಎಸ್‌ಪಿ ರವಿ ಡಿ ನಾಯ್ಕ್, ಸಿಪಿಐ ಪ್ರದೀಪ್ ಬಿ ಯು ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಕ್ರೈಂ ಪಿಎಸ್‌ಐ ಮೋಹಿನಿ ಶೆಟ್ಟಿ, ಪ್ರಶಾಂತ್ ಪಾವಸ್ಕರ್, ಗಣಪತಿ ಪಟಗಾರ್ ಅವರನ್ನು ಒಳಗೊಂಡ ತಂಡ ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಯನ್ನು ಸೆರೆ ಹಿಡಿದ್ದಾರೆ.

RELATED ARTICLES  ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜ ಗಂಗಾವಳಿ-ಗಂಗೆಕೊಳ್ಳ ಇವರ ಆಶ್ರಯದಲ್ಲಿ ಯಶಸ್ವಿಯಾದ ಕ್ರಿಕೆಟ್ ಪಂದ್ಯಾವಳಿ.