ಕುಮಟಾ: ಇಲ್ಲಿಯ ಕೂಜಳ್ಳಿಯ ಯಕ್ಷಗಾನ ಕಲಾವಿದ ಮೋಹನ ನಾಯ್ಕರ ‘ಗಣರಾಜ’ ಮನೆಯಂಗಳದಲ್ಲಿ ದಿ.10 ರಂದು ಇಳಿಹೊತ್ತು 3.30ಕ್ಕೆ ಅವರು ಬರೆದ ಚರಿತ್ರೆ ಮತ್ತು ಅಧ್ಯಯನ ಪುಸ್ತಕ ‘ಉತ್ತರ ಕನ್ನಡದಲ್ಲಿ ಕುಮಾರರಾಮ’ ಲೋಕಾರ್ಪಣೆಗೊಳ್ಳಲಿದೆ.
ಹಿರಿಯ ಜಾನಪದ ವಿದ್ವಾಂಸ, ಸಾಹಿತಿ ಎನ್.ಆರ್.ನಾಯಕ ಹೊನ್ನಾವರ ಇವರು ಪುಸ್ತಕ ಅನಾವರಣಗೊಳಿಸಲಿದ್ದಾರೆ. ಕೃತಿಯ ಕುರಿತು ಸಾಹಿತ್ಯಚಿಂತಕ ಎನ್.ಆರ್.ಗಜು ಮಾತನಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರಿವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿಗಳಾದ ಸುಮುಖಾನಂದ ಜಲವಳ್ಳಿ, ಶಾರದಾ ಭಟ್ಟ ಹಾಗೂ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್.ವಿ.ಹೆಗಡೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಾಹಿತ್ಯಾಭಿಮಾನಿಗಳು, ಕುಮಾರರಾಮನ ಬಗೆಗಿನ ಸಹಜ ಕುತೂಹಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೃತಿಕಾರ ಮೋಹನ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಯುವತಿ ನಾಪತ್ತೆ : ಪ್ರಕರಣ ದಾಖಲು