ಯಲ್ಲಾಪುರ: ಕಾರ್ಯ ನಿಮಿತ್ತ ಯಲ್ಲಾಪುರಕ್ಕೆ ಬರುತ್ತಿದ್ದ ಕಾರವಾರದ ಡಿ.ವೈ.ಎಸ್.ಪಿ ಅರವಿಂದ್ ಕಲಗುಜ್ಜಿ ರವರ ಸರ್ಕಾರಿ ವಾಹನಕ್ಕೆ ಎದುರಿನಿಂದ ಬಂದ ಓಮಿನಿ ಡಿಕ್ಕಿ ಹೊಡೆದಿದ್ದು,‌ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ದುರ್ಘಟನೆಯಲ್ಲಿ ಡಿವೈಎಸ್.ಪಿ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೊಲೀಸ್ ವಾಹನ ಮತ್ತು ಓಮಿನಿ ನಡುವೆ ಡಿಕ್ಕಿ ಸಂಭವಿಸಿ, ಡಿವೈಎಸ್ ಪಿ ಗಾಯಗೊಂಡ‌ ಘಟನೆ ಯಲ್ಲಾಪುರ ತಾಲೂಕಿನ ಬೀರಗದ್ದೆ ಗಣಪತಿ ದೇವಸ್ಥಾನದ ಬಳಿ ನಡೆದಿದೆ. ತಮ್ಮ ವಾಹನದಲ್ಲಿ ಡಿವೈಎಸ್ ಪಿ ಕಾರವಾರದಿಂದ‌ ಯಲ್ಲಾಪುರಕ್ಕೆ ಬರುತ್ತಿದ್ದ ವೇಳೆ ಏಕಾಏಕಿ ಮಗುವೊಂದು ಅಡ್ಡಬಂದಿದೆ. ಈ ವೇಳೆ ಮಗುವನ್ನು ತಪ್ಪಿಸಲು ಹೋಗಿ ಎದುರಿನಿಂದ ಬರುತ್ತಿದ್ದ ಓಮಿನಿಗೆ ಪೊಲೀಸ್ ವಾಹನ‌ಡಿಕ್ಕಿ ಹೊಡೆದಿದೆ.

RELATED ARTICLES  ಕೋಟಿ ತೀರ್ಥದಲ್ಲಿ ಕಾಲುಜಾರಿ ಬಿದ್ದು ವ್ಯಕ್ತಿ ಸಾವು.

ಪ್ರಕರಣವೊಂದರ ತನಿಖೆಗಾಗಿ ಮುಂಡಗೋಡಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಓಮಿನಿ ಪಲ್ಟಿಯಾದ ಹಿನ್ನಲೆ ಓಮಿನಿಯಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಡಿವೈಎಸ್.ಪಿ ಅವರ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES  ಏಕಾಏಕಿ ಪಲ್ಟಿಯಾದ ಕಾರು