ಬಡಗಣಿ – ಸ್ನೇಹಕುಂಜ ಕಾಸರಕೋಡ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್ ಕುಮಟಾ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಆಧ್ಯಕ್ಷರೂ ಹಾಗೂ ಖ್ಯಾತ ವೈದ್ಯರಾದಂತಹ ಡಾ|| ಅಶೋಕ ಭಟ್ ಹಳಕಾರ್ ರವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಷಯ ವನ್ನು ತಿಳಿಸುತ್ತಾ, ಮಹಿಳೆಯರು ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರವಾದುದು. ಸಾದನೆ ಮಾಡಿದ ಮಹಿಳೆಯರನ್ನು ನೆನಪಿಸುವದರೊಂದಿಗೆ ಮಹಿಳೆಯರಿಗೆ ಸ್ತನ ಕ್ಯಾನ್ಸರ್, ಕರುಳ ಕ್ಯಾನ್ಸರ್ ಕುರಿತಾಗಿ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಲಕ್ಷ್ಮೀ ದಳವಾಯಿ ಕೃಷಿ ಅಧಿಕಾರಿ ಹೊನ್ನಾವರ ಇವರು ಮಾತನಾಡುತ್ತಾ ಮಹಿಳೆರು ಅಬಲೆಯರಲ್ಲ ಸಬಲರು, ಮಹಿಳೆಯರು ಸಮಾeದಲ್ಲಿ ಮುಂದೆ ಬರಬೇಕಾದಲ್ಲಿ ಆರೋಗ್ಯವು ಕೂಡ ಅಷ್ಟೇ ಮುಖ್ಯ ಎಂದು ತಿಳಿಸಿದರು.
ಫ್ಯಾಮಿಲಿ ಪ್ಲ್ಯಾನಿಂಗ್ ಮ್ಯಾನೇಜರ್ ಆದ ಶ್ರೀಮತಿ ಸಂತಾನ್ ಲೂಯಿಸ್ ರವರು ಮಹಿಳಾದಿನಾಚರಣೆ ಅಂಗವಾಗಿ ಮಾತನಾಡಿದರು.
ಮಹಿಳೆಯರು ತಮ್ಮ ಸಂತ ಕಾಲಿನಲ್ಲಿ ನಿಲ್ಲಬೇಕೆಂದು ಸ್ವ ಉದ್ಯೋಗ ಮಾಡುವ ಬಗ್ಗೆ ಆತ್ಮ ಯೋಜನೆ ಅಡಿಯಲ್ಲಿ ಶೇತಾ ವಿವೇಕಾನಂದ ರಾಯ್ಕರ್ ರವರು ತರಬೇತಿಯನ್ನು ಹಮ್ಮಿಕೊಂಡಿದ್ದರು. ಸಾಬೂನು ತಯಾರಿಕೆ, ಬಟ್ಟೆಸೋಪು ತಯಾರಿಕೆ, ಮೈ ಸೋಪ್ ತಯಾರಿಕೆ, ಟೂತ್‍ಪೇಸ್ಟ ತಯಾರಿಕೆ, ಮುಂತಾದವುಗಳನ್ನು ಪ್ರಾತ್ಯಕ್ಷಿಕವಾಗಿ ತಯಾರಿಸಿದರು.
ಅಧ್ಯಕ್ಷತೆ ವಹಿಸಿದ ಸ್ನೇಹಕುಂಜದ ಸಮಾಜ ಕಾರ್ಯಕರ್ತೆಯಾದ ಶ್ರೀಮತಿ ಚಂದ್ರಕಲಾ ಗಾವಡಿಯವರು ಮಹಿಳೆಯರಿಗೆ ಕೆಲವು ಹಿತನುಡಿಯನ್ನು ನುಡಿದು ಸ್ನೇಹಕುಂಜದಲ್ಲಿ ಸಿಗುವ ಸೌಲಭ್ಯದ ಕುರಿತು ತಿಳಿಸಿದರು.
ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಪ್ರೋಗ್ರಾಮ್ ಆಫೀಸರ್ ಆದಂತಹ ಕುಮಾರಿ ಮಂಜುಳಾ ಗೌಡ ಸ್ವಾಗತಿಸಿದರು. ರೋಹಿಣ ಚಂದ್ರಶೇಖರ್ ಇವರು ವಂದನಾರ್ಪಣೆ ನೆರವೇರಿಸಿಕೊಟ್ಟರು.
.