ಕುಮಟಾ : ಆತ್ಮಲಿಂಗದ ಪಂಚಕ್ಷೇತ್ರಗಳಲ್ಲೊಂದಾದ ಶ್ರೀಕ್ಷೇತ್ರ ಧಾರೇಶ್ವರದ ಶ್ರೀ ಧಾರಾನಾಥ ದೇವರ ಸನ್ನಿಧಿಯಲ್ಲಿ ನಾಳೆ ಶ್ರೀ ಮಹಾಶಿವರಾತ್ರಿಯ ಪ್ರಯುಕ್ತ ಸಾರ್ವಜನಿಕರಿಗೆ ಅಭಿಷೇಕ, ಪೂಜೆಗೆ ಅವಕಾಶ ಇರಲಿದೆ.

RELATED ARTICLES  ಕುಮಟಾದಲ್ಲಿ ಸುಂದರವಾಗಿ ಮೂಡಿಬರಲಿದೆ “ನುಡಿ ಹಬ್ಬ”! ನಡೆದಿದೆ ಪೂರ್ವ ಸಿದ್ಧತೆ.

ವರ್ಷದಂತೇ ಸಾರ್ವತ್ರಿಕವಾಗಿ ಭಕ್ತಾದಿಗಳಿಗೆ ಸ್ವಹಸ್ತಗಳಿಂದ ಶ್ರೀ ದೇವರಿಗೆ ಅಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕ ಪೂಜೆ ಹಾಗೂ ಫಲಸಮರ್ಪಣೆ, ಮಂಗಳಾರತಿ ಸೇವೆಗಳಿಗೆ ಅವಕಾಶ ನೀಡಲಾಗಿದ್ದು ಭಕ್ತಾದಿಗಳು ಧಾರಾನಾಥ ಸ್ವಾಮಿಯ ಸನ್ನಿಧಾನಕ್ಕೆ ಬಂದು ( COVID-19 ರ ನಿಯಮಾವಳಿಗಳ ಪಾಲನೆಯ ಮುನ್ನೆಚ್ಚರಿಕೆಯೊಂದಿಗೆ ) ಸೇವೆಗೈದು ಶ್ರೀ ದೇವರ ಕೃಪೆಗೆ ಪಾತ್ರರಾಗಿರೆಂದು ದೇವಾಲಯದ ಆಡಳಿತಮಂಡಳಿ ಕೋರಿಕೆ.

RELATED ARTICLES  ಭಟ್ಕಳ ತಾಲೂಕು ಕಸಾಪದಿಂದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ.