ಶಿರಸಿ; ಮನೆ, ಚಿಕ್ಕ ತೋಟಕ್ಕೆ ನೀರಿನ ಸಮಸ್ಯೆ ಎದುರಾದಾಗ ಏಕಾಂಗಿಯಾಗಿ ಬಾವಿ ತೋಡಿ ನೀರು ಬರಲು ಕಾರಣರಾಗಿದ್ದ ಶಿರಸಿಯ ಸಾಹಸಿ ಮಹಿಳೆ ಗೌರಿ ಸಿ.ನಾಯ್ಕರಿಗೆ ಈ ಸಾಲಿನ ರಾಜ್ಯ ಮಟ್ಟದ ವೀರ ಮಹಿಳೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

RELATED ARTICLES  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

2018 ರಲ್ಲಿ ನೀರಿಗಾಗಿ ಈ ಮಹಿಳೆ ಬಡತನದ ನಡುವೆ ತಾವೊಬ್ಬರೇ ಬಾವಿತೋಡಿ ನೀರು ಬರಲು ಕಾರಣರಾಗಿದ್ದರು. ಆಗ ಜಿಲ್ಲಾದ್ಯಂತ ಬಹಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಸಾಹಸಕ್ಕೆ ಹಲವು ಸಂಘಟನೆಗಳು ಗೌರವಿಸಿದ್ದವು. ಇದೀಗ ರಾಜ್ಯ ಸರ್ಕಾರ ಗುರುತಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸದ್ಯವೇ ಬೆಂಗಳೂರಲ್ಲಿ ಪ್ರಶಸ್ತಿ 25000.ರೂ ಬಹುಮಾನ ನೀಡಲಾಗುತ್ತದೆ.

RELATED ARTICLES  ಡಿವೈಎಸ್ಪಿ ಹುದ್ದೆಗೆ ಜು.19ರಂದು ಧನ್ಯಾ ನಾಯಕ ಅಧಿಕಾರ ಸ್ವೀಕಾರ