ಹಿರೇಗುತ್ತಿ: “ಸೃಷ್ಠಿಯ ಅದ್ಭುತ ರೂಪ ಭರವಸೆಗಳ ಒಡತಿ, ಸಾಧನೆಯ ಸ್ಪೂರ್ತಿ, ತಾಳ್ಮೆಯ ಮೂರ್ತಿ, ಪ್ರೀತಿಯ ಅರ್ಥ, ಕರುಣೆಯ ಕಡಲು, ಹೆಣ್ಣು ಮಾ-ಮಾತೆ-ಮಮತೆಯ ಸಾಕಾರ ಮೂರ್ತಿಯಾದ ತಾಯಂದಿರ ಸಭೆಯನ್ನು ನಮ್ಮ ಹೈಸ್ಕೂಲಿನಲ್ಲಿ ಆಯೋಜಿಸಲಾಗಿದೆ ಏಕೆಂದರೆ ವಿದ್ಯಾರ್ಥಿಗಳ ತಾಯಂದಿರು ಹಾಗೂ ಶಿಕ್ಷಕರು ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸಲು ಯಾವ ರೀತಿ ಯೋಜನೆ ಹಮ್ಮಿಕೊಳ್ಳಬೇಕು ಎಂಬ ಘನ ಉದ್ದೇಶವನ್ನು ಈ ತಾಯಂದಿರ ಸಭೆ ಹೊಂದಿದೆ.” ಎಂದು ಹೈಸ್ಕೂಲ್ ಆಡಳಿತ ಮಂಡಳಿ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ನಾಯಕ ನುಡಿದರು.
ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ನಡೆದ ತಾಯಂದಿರ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. “ನಮ್ಮ ಸಂಸ್ಥೆಯು ಹೊಸದಾಗಿ 2021-22 ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮದಲ್ಲಿ ಓuಡಿseಡಿಥಿ, ಐ.ಏ.ಉ, U.ಏ.ಉ & 1sಣ ತರಗತಿ ಆರಂಭಿಸಿದೆ ಏಕೆಂದರೆ ನಮ್ಮ ಊರಿನ ಸುತ್ತಮುತ್ತಲಿನ ಸುಮಾರು 75 ವಿದ್ಯಾರ್ಥಿಗಳು ದೂರದ ಆಂಗ್ಲ ಮಾದ್ಯಮ ಶಾಲೆಗೆ ಹೋಗುವುದನ್ನು ಮನಗಂಡು ಹಾಗೂ ಅತಿ ಹೆಚ್ಚಿನ ಪ್ರವೇಶಶುಲ್ಕ ಭರಿಸುವುದನ್ನು ಮನಗಂಡು ನಮ್ಮ ಶೈಕ್ಷಣ ಕ ಕ್ಷೇತ್ರದಲ್ಲಿಯೇ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಂಗ್ಲ ಮಧ್ಯಮ ಶಿಕ್ಷಣ ನೀಡುವುದಕ್ಕೆ ನಿರ್ಧರಿಸಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿದ್ದೇವೆ ಇದಕ್ಕೆ ನಿದರ್ಶನವಾಗಿ ಇಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮಾತೆಯರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ” ಎಂದರು.
ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಮೋಹನ ಬಿ ಕೆರೆಮನೆ ಮಾತನಾಡಿ “ನಮ್ಮ ಶಾಲೆಯಲ್ಲಿ ನುರಿತ ಹಾಗೂ ಅನುಭವಿ ಶಿಕ್ಷಕರು, ಹಲವು ಸ್ಪರ್ಧಾತ್ಮಕ ಪರೀಕ್ಷಾ ತಯಾರಿ, ಶಿಸ್ತಿನಿಂದ ಕೂಡಿದ ವಿದ್ಯಾಭ್ಯಾಸ & ಗಣಕೀಕೃತ ಶಿಕ್ಷಣ, ಉತ್ತಮ ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣ ಗೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ” ಎಂದರು.
ಹಿರಿಯ ಪತ್ರಕರ್ತರಾದ ಎಮ್.ಜಿ ನಾಯ್ಕ್ ಕುಮಟಾರವರು ಮಾತನಾಡಿ “ಹಿರೇಗುತ್ತಿ ಹೈಸ್ಕೂಲಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ, ಉತ್ತಮ ನುರಿತ ಶಿಕ್ಷಕರಿದ್ದಾರೆ. ನಮ್ಮ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. ಶಿಕ್ಷಕರು ತ್ಯಾಗ ಮತ್ತು ಪ್ರೀತಿಯಿಂದ ಶಿಕ್ಷಣ ನೀಡುವಂತಾಗಲಿ, ಕೊರೊನಾ ಬಗ್ಗೆ ತಾತ್ಸಾರ ಬೇಡ ಜಾಗೃತಿ ಇರಲಿ” ಎಂದರು.
ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ, ಸುಮನ್ ಫರ್ನಾಂಡಿಸ್, ಪತ್ರಕರ್ತ ರಾಘವೇಂದ್ರ ದಿವಾಕರ್ ಕೆನರಾ ಪ್ಲಸ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಆಂಗ್ಲ ಮಾಧ್ಯಮ ಹಾಗೂ ಹೈಸ್ಕೂಲ್‍ನ 10 ನೇ ವರ್ಗದ ವಿದ್ಯಾರ್ಥಿಗಳ ಸುಮಾರು 150 ಕ್ಕೂ ಹೆಚ್ಚಿನ ತಾಯಂದಿರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮವು ಸ್ವಾತಿ ಸಂಗಡಿಗರ ಸ್ವಾಗತ ಗೀತೆಯೊಂದಿಗೆ ಆರಂಭವಾಯಿತು. ವಿದ್ಯಾರ್ಥಿನಿ ನಾಗಶ್ರೀ ಪಟಗಾರ ಕಾರ್ಯಕ್ರಮ ನಿರೂಪಣೆ ಮಾಡಿದರು. ಸನಿದ ನಾಯಕ ಸ್ವಾಗತಿಸಿದರು. ಶಬರೀಶ ಪಟಗಾರ ಸರ್ವರನ್ನು ವಂದಿಸಿದರು.
ವರದಿ: ಎನ್ ರಾಮು ಹಿರೇಗುತ್ತಿ