ಸಿದ್ದಾಪುರ : ಸೈಕಲ್ ತಳ್ಳಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಬುಲೆರೋ ಡಿಕ್ಕಿ ಹೊಡೆದಿದ್ದು, ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಪಡಂಬಯಲಿನಲ್ಲಿ ಹುಲ್ಲುಂಡೆ ಗ್ರಾಮದ ಹೊಸಗದ್ದೆಯ ಸಮೀಪ ಸೋಮವಾರ ನಡೆದಿದೆ.

ಗಾಯಗೊಂಡ ವಿದ್ಯಾರ್ಥಿನಿ ಸಹನಾ ಜಟಪ್ಪ ಪಟಗಾರ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿ ತನ್ನ ಸೈಕಲ್ ದೂಡಿಕೊಂಡು ಹೋಗುತ್ತಿರುವಾಗ ವೇಗವಾಗಿ ಬಂದ ಬೊಲೆರೋ ವಾಹನ ಡಿಕ್ಕಿ ಹೊಡೆದಿದ್ದು, ಬಾಲಕಿಯ ತಲೆಯ ಹಿಂಬದಿ ಭಾಗಕ್ಕೆ ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾಳೆ .

RELATED ARTICLES  ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ ಮಕ್ಕಳ ಸಂತೆ

ವಿಪರೀತ ಪೆಟ್ಟು ತಗುಲಿದ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಆಸ್ಪತ್ರೆಗೆ ಕಳುಹಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ . ಬೊಲೆರೋ ವಾಹನವನ್ನು ವೆಂಕಟ್ರಮಣ ಗಣಪತಿ ನಾಯ್ಕ ಹೆಗ್ಗಾರಬಯಲು ಎಂಬುವವರಿಗೆ ಸೇರಿದ್ದೆಂದು ಹೇಳಲಾಗುತ್ತಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸ್‌ಆಯ್ ಮಹಂತಪ್ಪ ಜಿ.ಕುಂಬಾರ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು ಎಎಸ್‌ಆಯ್ ಗೀತಾ ಶಿರಸಿಕರ್ ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ .

RELATED ARTICLES  ದಿ.ರಾಮಚಂದ್ರ ಹೆಗಡೆಯವರಿಗೆ ಶ್ರದ್ಧಾಂಜಲಿ ಸಮರ್ಪಣೆ : ಒಡನಾಡಿಗಳಿಂದ ನುಡಿ ನಮನ