ಹೊನ್ನಾವರ : ತಾಲೂಕಿನ ಶರಾವತಿ ಮೇಲ್ಸೇತುವೆಯಲ್ಲಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.

ಭಟ್ಕಳ ತಾಲೂಕಿನ ಶಿರಾಲಿ ನಿವಾಸಿ ಪ್ರಕಾಶ ನಾಗಪ್ಪ ಶೆಟ್ಟಿ ಎಂಬುವವರೇ ಮೃತ ದುರ್ದೈವಿ‌ ಎನ್ನಲಾಗಿದೆ. ಇವರು ಹೊನ್ನಾವರ ಪೋಸ್ಟ್ ಆಫೀಸಿನಲ್ಲಿ ಪೋಸ್ಟ ಮಾಸ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

RELATED ARTICLES  ಅಬ್ಬರಿಸಿದ ವರುಣ : ಜಿಲ್ಲೆಯಾದ್ಯಂತ ಅಪಾರ ಹಾನಿ

ಇಂದು ಸಂಜೆ ಕೆಲಸ ಮುಗಿಸಿ ಭಟ್ಕಳಕ್ಕೆ ಹಿಂದಿರುಗುವ ಸಂದರ್ಭದಲ್ಲಿ ಶರಾವತಿ ಸೇತುವೆಯ ಮೇಲೆ ಇತನ ಬೈಕ್ ಗೆ ಇನ್ನೊಂದು ಬೈಕ್ ಬಂದು ಗುದ್ದಿದ್ದು , ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ.ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಲಾರಿ ಪ್ರಕಾಶ ಅವರಿಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಯಿಂದ ಕೆಲ‌ಕಾಲ‌ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು ಎನ್ನಲಾಗಿದೆ.

RELATED ARTICLES  ಮಲೆನಾಡಿನಲ್ಲಿ ಮಂಗನ ಕಾಯಿಲೆ ಉಲ್ಬಣ

ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಆಡಳಿತವರ್ಗ ಮತ್ತೆ ಮತ್ತೆ ಸಾರ್ವಜನಿಕರಲ್ಲಿ ವಿನಂತಿಸುತ್ತಿದೆ.