ಕುಮಟಾ: ‘ಜಗತ್ತಿನಲ್ಲಿಯೇ ಉತ್ತರ ಕನ್ನಡ ಸಾಂಸ್ಕøತಿಕವಾಗಿ ಒಂದು ಸಂಪದ್ಭರಿತ ಜಿಲ್ಲೆ. ಇಲ್ಲಿಯ ಜನಪದ ಆಚರಣೆಗಳ ಕುರಿತಾಗಿ ನನ್ನ ಅಧ್ಯಯನ ಸಮುದ್ರದಲ್ಲಿಯ ಒಂದು ಹನಿ ನೀರೆತ್ತಿದ್ದಷ್ಟು ಮಾತ್ರ. ಆದರೆ ಮೋಹನ ನಾಯ್ಕರು ಸಾಕಷ್ಟು ಕ್ಷೇತ್ರಕಾರ್ಯ ಮಾಡಿ ಬಂಡಿ ಹಬ್ಬಗಳ ಆಚರಣೆಯ ಹಿನ್ನೆಲೆಯನ್ನು ಅರಿಯುವ ಪ್ರಯತ್ನ ನಡೆಸಿದ್ದಾರೆ. ಅದರಲ್ಲಿ ಅವರು ಸಫಲತೆ ಕಂಡಿದ್ದು, ಕುಮಾರರಾಮನ ಬಗ್ಗೆ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಈ ಕೃತಿ ನವಯುವಕರಿಗೆ ಮತ್ತು ಹೊಸ ಪೀಳಿಗೆಯವರಿಗೆ ಮಾರ್ಗದರ್ಶಿಯಾಗುತ್ತದೆ’ ಎಂದು ಹಿರಿಯ ಜಾನಪದ ವಿದ್ವಾಂಸ, ಸಾಹಿತಿ ಡಾ.ಎನ್.ಆರ್.ನಾಯಕ ಅಭಿಮಾನದ ನುಡಿಗಳನ್ನಾಡಿದರು. ಅವರು ಕೂಜಳ್ಳಿಯ ಯಕ್ಷಗಾನ ಕಲಾವಿದ ಮೋಹನ ನಾಯ್ಕರ ದ್ವಿತೀಯ ಕೃತಿ ‘ಉತ್ತರ ಕನ್ನಡದಲ್ಲಿ ಕುಮಾರ ರಾಮ’ ಎಂಬ ಚರಿತ್ರೆ ಮತ್ತು ಆರಾಧನೆಯ ಪುಸ್ತಕವನ್ನು ಕೃತಿಕಾರನ ಮನೆಯಂಗಳ ಗಣರಾಜದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.

RELATED ARTICLES  ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಅಪರಿಚಿತ ಶವ

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಪ್ರಭಾ ಪತ್ರಿಕೆಯ ಸಂಪಾದಕ, ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಮಾತನಾಡುತ್ತಾ, ಈ ಸಂಶೋಧನಾ ಸಾಹಿತ್ಯ ಅದ್ವಿತೀಯವಾದುದಾಗಿದೆಯಲ್ಲದೇ ಇಲ್ಲಿಯ ಜನರ ಜೀವನದಲ್ಲಿ ಹಾಸುಹೊಕ್ಕಾದ ಕುಮಾರರಾಮನ ಆರಾಧನೆಯಲ್ಲಿ ಅನೇಕ ರಹಸ್ಯಗಳಡಗಿವೆ ಎಂಬ ಅಂಶವನ್ನು ವ್ಯಕ್ತಪಡಿಸಿದರು. ಹಿರಿಯ ಸಾಹಿತಿ ಶಾರದಾ ಭಟ್ಟ ಹಾಗೂ ವಿಶ್ರಾಂತ ಸಹಾಯಕ ಕೃಷಿ ನಿರ್ದೇಶಕ ಎಸ್.ವಿ.ಹೆಗಡೆ ಶುಭಹಾರೈಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಕುಮಾರರಾಮನ ಕುರಿತು ಸದ್ಯೋಭವಿಷ್ಯದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಏರ್ಪಡಿಸುವುದಾಗಿ ತಿಳಿಸಿದರು. ಪ್ರಾರಂಭದಲ್ಲಿ ಕೃತಿಕತ್ರ್ರು ಮೋಹನ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿ ಎನ್.ಆರ್. ಗಜು ಪುಸ್ತಕದ ವಿಮರ್ಶಾತ್ಮಕ ಪರಿಚಯ ನೀಡಿದರು. ಕಲಾವಿದ ವಿಶ್ವನಾಥ ನಾಯ್ಕ ಕೋನಳ್ಳಿ ನಿರೂಪಿಸಿದರು. ಮೋಹನ ನಾಯ್ಕರ ಪತ್ನಿ ಬರಹಗಾರ್ತಿ ಎಂ.ಕೆ.ಲಕ್ಷ್ಮಿ, ಮಗ ಭೋಜರಾಜ, ಸೊಸೆ ದಿಶಾ ಹಾಗೂ ಸಾಹಿತ್ಯವಲಯದ ಪ್ರಮುಖರಾದ ತಿಗಣೇಶ ಮಾಗೋಡ, ಕೃಷ್ಣಾನಂದ ಭಟ್ಟ, ಸಿ.ಎಂ.ಪಟಗಾರ, ಸಂಧ್ಯಾ ಭಟ್ಟ, ಗಣೇಶ ಪಟಗಾರ, ಶಿವಚಂದ್ರನ್ ಹೆರವಟ್ಟಾ, ವಿನೋದ ನಾಯ್ಕ ಊರಕೇರಿ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ಅಡಕೆ ಸಮಸ್ಯೆ ಕುರಿತು ಸಚಿವರನ್ನು ಭೇಟಿಮಾಡಿ ಮನವಿ ಸಲ್ಲಿಸಿದ ಪ್ರಮುಖರು