ಕುಮಟಾ : ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಎಸ್ವಿ ಫಿದಾ ಕರ್ನಾಟಕ ಐಕಾನ್ 2021 ಸೌಂದರ್ಯ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಮೂಲದ ಭಾವನಾ ಭಾಗವತ್ ಮಿಸ್ ಕರ್ನಾಟಕ ಆಗಿ ಹೊರ ಹೊಮ್ಮಿದ್ದಾಳೆ.

ಬೆಂಗಳೂರಿನ ಉದ್ಯಮಿ, ದಿಶಾ ಎಂಟರ್‍ಪ್ರೈಸಸ್ ಮಾಲಕ, ಮೂಲತಃ ಕುಮಟಾ ತಾಲೂಕಿನ ಕಡೆಕೋಡಿಯ ಮಂಜುನಾಥ ಭಾಗವತ್ ಹಾಗೂ ಲಲಿತಾ ಭಾಗವತ್ ಅವರ ಪ್ರಥಮ ಪುತ್ರಿ ಭಾವನಾ ನಟನೆ, ಬುದ್ದಿವಂತಿಕೆ, ಸೌಂದರ್ಯ ಸೇರಿದಂತೆ ಹಲವು ವಿಭಾಗದಲ್ಲಿ ಗೆಲುವು ಸಾಧಿಸಿ ಈಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ನಾಡಿನ ವಿವಿಧಡೆಯಿಂದ ಸಾವಿರಕ್ಕೂ ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.

RELATED ARTICLES  ಫೇ 28 ಕ್ಕೆ ಕುಮಟಾ ತಾಲೂಕಿನ ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ.

ರೋಮಿಯೋ ಜ್ಯುಲಿಯಟ್ ಸಿನೇಮಾದಲ್ಲಿ ಬಾಲ ನಟಿಯಾಗಿಯೂ ಪಾತ್ರ ಮಾಡಿದ್ದ ಪ್ರತಿಭಾನ್ವಿತೆ ಭಾವನಾಗೆ ಈಗ ಕನ್ನಡ ಹಾಗೂ ತೆಲಗು ಸಿನೆಮಾದಲ್ಲಿಯೂ ನಟನೆ ಈಗ ಅವಕಾಶ ಹುಡುಕಿಕೊಂಡು ಬರುತ್ತಿದೆ. ಭರತನಾಟ್ಯ, ವೆಸ್ಟರ್ನ ಡಾನ್ಸ, ಶಾಸ್ತ್ರೀಯ ಸಂಗೀತ ಕಲಾವಿದೆಯೂ ಆಗಿರುವ ಬಹುಮುಖ ಪ್ರತಿಭೆಯ ಭಾವನಾ ಈಗಾಗಲೇ ವಿವಿಧ ಉತ್ಪನ್ನಗಳಿಗೆ ರೂಪದರ್ಶಿಯಾಗಿಯೂ ಆಗಿದ್ದಾಳೆ. ಕನ್ನಡ ಸೇರಿದಂತೆ ವಿವಿಧ ಟಿವಿ, ರೆಡಿಯೋ ಶೋಗಳಲ್ಲೂ ಪಾಲ್ಗೊಂಡಿದ್ದಾಳೆ. ನಟನೆಯಲ್ಲಿ ಡಿಪ್ಲೋಮಾ, ಬಿಬಿಎಂ ಪದವಿ ಕೂಡ ಪಡೆದಿದ್ದಾಳೆ.

RELATED ARTICLES  ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ

ಪ್ರಸ್ತುತ ಬೆಂಗಳೂರಿನಲ್ಲಿ ತಂದೆಯ ಜೊತೆಗೆ ಉದ್ಯಮದಲ್ಲಿ ಸಹಭಾಗಿಯೂ ಆಗಿದ್ದಾಳೆ ಎಂಬುದು ಉಲ್ಲೇಖನೀಯ.
ಅಭಿಂದನೆ: ಭಾವನಾ ಭಾಗವತ್ ಸಾಧನೆಗೆ ಇಲ್ಲಿನ ರಾಗಿಣಿ ಪ್ರತಿಷ್ಠಾನದ ಮುಖ್ಯಸ್ಥ ಪ್ರಕಾಶ ಹೆಗಡೆ ಯಡಹಳ್ಳಿ ಅಭಿನಂದನೆ ಸಲ್ಲಿಸಿದ್ದಾರೆ.