ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಪ್ರಕಟಿಸಲಾಗಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಕೊಂಕಣಿ ಕವಿ ಅರುಣ್ ಸುಬ್ರಾವ್ ಉಭಯಕರ ಕುಮಟಾ, ಕಲಾ ಕ್ಷೇತ್ರದಲ್ಲಿ ಪುತ್ತೂರು ಪಾಂಡುರಂಗ ನಾಯಕ್, ಜಾನಪದ ಕ್ಷೇತ್ರದಲ್ಲಿ ಲಕ್ಷ್ಮಿಕೃಷ್ಣ ಸಿದ್ದಿ ಅವರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕವನ ವಿಭಾಗದಲ್ಲಿ ಪ್ರೇಮ್ ಮೊರಾಸ್ ಮಂಗಳೂರು ಅವರ ಏಕ್ ಮೂಟ್ ಪಾವ್ಲ್ಯೊ, ಸಣ್ಣ ಕತೆ ವಿಭಾಗದಲ್ಲಿ ಡೆಸಾ ಮಥಾಯಸ್ ಅವರ ನವಿ ದಿಶಾ, ಲೇಖನ ವಿಭಾಗದಲ್ಲಿ ಸ್ವೀವನ್ ಕ್ವಾಡ್ರಸ್ ಪೆರ್ಮುದೆ ಅವರ ಸುಗಂಧು ಸ್ವಾಸ್ ಪುಸ್ತಕಗಳು ಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿವೆ ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಕೆ. ಜಗದೀಶ ಪೈ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

RELATED ARTICLES  ಕುಮಟಾದಲ್ಲಿ ಮೂರು ಕೊರೋನಾ ದೃಢ

ಗೌರವ ಪ್ರಶಸ್ತಿ 50 ಸಾವಿರ ರೂ. ನಗದು, ಪುಸ್ತಕ ಪುರಸ್ಕಾರ 25 ಸಾವಿರ ರೂ. ನಗದು ಒಳಗೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರ ಸಮಯ ಗೊತ್ತುಪಡಿಸಿಕೊಂಡು ಶೀಘ್ರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲಾಗುವುದು ಎಂದರು.

RELATED ARTICLES  ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ.

ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಸಾಣೂರು ನರಸಿಂಹ ಕಾಮತ್, ಅರುಣ್ ಜಿ. ಶೇಟ್, ಗೋಪಾಲಕೃಷ್ಣ ಭಟ್, ರಿಜಿಸ್ಟ್ರಾರ್ ಆರ್. ಮನೋಹರ ಕಾಮತ್ ಉಪಸ್ಥಿತರಿದ್ದರು.