ಗೋಕರ್ಣ: ಭಾರತೀಯ ಭವ್ಯ ಪರಂಪರೆ ಹಾಗೂ ಹಾಲಕ್ಕಿ ಜನಾಂಗದ ವಿಶಿಷ್ಟ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಮಹದುದ್ದೇಶದಿಂದ ಶ್ರೀರಾಮಚಂದ್ರಾಪುರಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆರಂಭಿಸಿರುವ ತುಳಸಿ ಗುರುಕುಲಕ್ಕೆ ಪ್ರವೇಶ ಪಡೆಯಲು ಹಾಲಕ್ಕಿ ಜನಾಂಗದ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

2021-22ನೇ ಶೈಕ್ಷಣಿಕ ವರ್ಷದಿಂದ ಐದನೇ ತರಗತಿ ಆರಂಭವಾಗುತ್ತಿದ್ದು, ನಾಲ್ಕನೇ ತರಗತಿ ಉತ್ತೀರ್ಣರಾಗಿರುವ/ ಒಂಬತ್ತು ವರ್ಷ ಪೂರ್ಣಗೊಂಡ ಹಾಲಕ್ಕಿ ಸಮುದಾಯಕ್ಕೆ ಸೇರಿದ ಮಕ್ಕಳು ಅರ್ಜಿ ಸಲ್ಲಿಸಬಹುದು.

ಇತರ ತರಗತಿಗಳಿಗೆ ಪ್ರವೇಶ ಪಡೆಯಬಯಸುವ ಹಾಲಕ್ಕಿ ಬಾಲಕ ಬಾಲಕಿಯರು ವಿವಿವಿ ನಡೆಸುತ್ತಿರುವ ಸಾರ್ವಭೌಮ ಅಥವಾ ರಾಜರಾಜೇಶ್ವರಿ ಗುರುಕುಲಗಳಿಗೆ ಅರ್ಜಿ ಸಲ್ಲಿಸಬಹುದು. ತುಳಸಿ ಗುರುಕುಲ, ಕುಡ್ಲೆಬೀಚ್ ಬಳಿ ವಿವಿವಿ ಆರಂಭಿಸಿರುವ ಪ್ರಾಣಾಂಕುರ ಪ್ರಾಂಗಣದಲ್ಲಿ ನಡೆಯಲಿದೆ.

RELATED ARTICLES  ವಿಷ್ಣುಗುಪ್ತ ವಿವಿವಿ ಗುರುಕುಲಕ್ಕೆ ಶೇ. 100 ಫಲಿತಾಂಶ

ಋಷಿಯುಗ, ನವಯುಗಗಳ ಸಮನ್ವಯ ಶಿಕ್ಷಣದ ಶ್ರೇಷ್ಠ ಪರಿಕಲ್ಪನೆಯಡಿ ಮಹೋನ್ನತ ಆಚಾರ್ಯರಿಂದ ಸಮಸ್ತ ಭಾರತೀಯ ವಿದ್ಯೆ- ಕಲೆಗಳ ಪರಿಚಯ ಶಿಕ್ಷಣ ಜತೆಗೆ ನುರಿತ ಶಿಕ್ಷಕರಿಂದ ಅತ್ಯುತ್ತಮ ಸಮಕಾಲೀನ ಶಿಕ್ಷಣ, ಮಕ್ಕಳನ್ನು ಮಮತೆಯಿಂದ ತಿದ್ದುವ ಮೆಂಟರ್‍ಗಳು, ಅತ್ಯಾಧುನಿಕ ತಂತ್ರಜ್ಞಾನ ಬಳಿಕೆ, ಸ್ಮಾರ್ಟ್‍ಕ್ಲಾಸ್ ಮತ್ತಿತರ ಅಪೂರ್ವ ಸೌಲಭ್ಯಗಳು ಗುರುಕುಲದ ವಿಶೇಷತೆಗಳಾಗಿವೆ. ಸಿಇಟಿ/ಜೆಇಇ/ನೀಟ್‍ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ಶಿಕ್ಷಣ ತಜ್ಞರಿಂದ ಅಂತರ್ಜಾಲ ಹಾಗೂ ಸಮ್ಮುಖ ಪಾಠಗಳು ನಡೆಯಲಿವೆ. ವಿವಿಧ ಕ್ಷೇತ್ರಗಳ ದಿಗ್ಗಜರು ಸನಾತನ/ ವಿನೂತನ ವಿಚಾರಗಳ ಬಗ್ಗೆ ಬೋಧನೆ ಮಾಡುವರು.
ಯೋಗ, ಧ್ಯಾನ, ಭಜನೆ, ಕ್ರೀಡೆಗಳಿಗೂ ಒತ್ತು ನೀಡಲಾಗುತ್ತಿದ್ದು, ಪ್ರಕೃತಿಯ ಮಡಿಲಲ್ಲಿ ಕುಟೀರಗಳಲ್ಲಿ ಪಾಠ ಪ್ರವಚನ ನಡೆಯಲಿದೆ. ಭಾರತ ಸರ್ಕಾರದ ಎನ್‍ಐಓಎಸ್ ಪಠ್ಯಕ್ರಮದಂತೆ ಸಮಕಾಲೀನ ಶಿಕ್ಷಣದ ಪಾಠ- ಪರೀಕ್ಷೆ ಪದವಿಗಳನ್ನು ನೀಡಲಾಗುತ್ತದೆ. ಮಧ್ಯಮವರ್ಗದವರಿಗೂ ಕೈಗೆಟುಕುವ ಶುಲ್ಕವಿದ್ದು, ಅದನ್ನೂ ಭರಿಸಲು ಸಾಧ್ಯವಾಗದವರಿಗೆ ವಿದ್ಯಾರ್ಥಿ ವೇತನದ ಸಹಾಯಹಸ್ತವೂ ಇದೆ. ಬಡತನದ ಕಾರಣದಿಂದ ಯಾವ ಮಕ್ಕಳು ಕೂಡಾ ಉತ್ತಮ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಪರಮಪೂಜ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಆಶಯದಂತೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು ವಿವರಗಳಿಗೆ ವಿವಿವಿ ಆಡಳಿತಾಧಿಕಾರಿ (9449495207) ಅಥವಾ ವರಿಷ್ಠಾಚಾರ್ಯ (9449595248) ಅವರನ್ನು ಸಂಪರ್ಕಿಸಬಹುದು.
ಗುರುಕುಲ ಪ್ರವೇಶಕ್ಕೆ ಲಿಂಕ್:   <https://forms.gle/Sk4atmZkcynC6FCm7>  ಇ-ಮೇಲ್: [email protected]

RELATED ARTICLES  ಬೇಕು ಬೇಡಗಳ ನಡುವೆ ಟಿಪ್ಪು ಜಯಂತಿ ಆಚರಣೆಗೆ ತಯಾರು.