ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವ,  ಗೋಕರ್ಣದ ಅಧಿಕೃತ ಆಂಡ್ರಾಯ್ಡ್  ಮೊಬೈಲ್ ಆಪ್ ಶಿವರಾತ್ರಿಯ ಶುಭಸಂದರ್ಭದಲ್ಲಿ ಕಾರ್ಯಾರಂಭವಾಯಿತು. ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಚಾಲನೆ ನೀಡಿದರು. ಪ್ರಪಂಚದ ಯಾವುದೇ ಮೂಲೆಯಲ್ಲಿ ಇದ್ದರೂ ಈ ಅಪ್ ನ ಮೂಲಕ ಶ್ರೀ ಮಹಾಬಲನ ಸೇವೆಮಾಡಲು,ಮಾಹಿತಿ ತಿಳಿಯಬಹುದಾಗಿದೆ.
ಮಹಾಬಲೇಶ್ವರನಿಗೆ ಸಲ್ಲುವ  ಕಾಣಿಕೆ, ಅಭಿವೃದ್ಧಿ ನಿಧಿ, ಆಭರಣ ನಿಧಿ, ಅಮೃತಾನ್ನ ಭೋಜನಕ್ಕೆ ದೇಣಿಗೆ ಸಲ್ಲಿಸುವ ಭಕ್ತಾದಿಗಳು ಈಗ  ಇರುವಲ್ಲಿಂದಲೇ ಒನ್ಲೈನ್ ಮೂಲಕ ದೇಣಿಗೆ ನೀಡಿ  ಸಾರ್ವಭೌಮನ ಕೃಪೆಗೆ ಪಾತ್ರರಾಗಬಹುದಾಗಿದೆ. ಮೊಬೈಲ್ ಆಪನ್ನು ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ “Sri Gokarna” ಎಂದು ಹುಡುಕಿದರೆ ಸಿಗುತ್ತದೆ ಅಥವಾ ಕೆಳಗಿನ ಲಿಂಕ್ ಉಪಯೋಗಿಸಿ ಡೌನ್ಲೋಡ್ ಮಾಡಬಹುದು.
www.srigokarna.org ವೆಬ್ ಸೈಟ್ ಈಗಾಗಲೇ ಹಲವಾರು ವರ್ಷಗಳಿಂದ ಮಾಹಿತಿಯನ್ನು ಜಗತ್ತಿಗೆ ನೀಡುತ್ತಾ ಇದೆ.ಈಗ ಅದರಲ್ಲಿಯೇ ಹೊಸದಾಗಿ ಒನ್ಲೈನ್ ಮೂಲಕ ಪಾವತಿಮಾಡಿ ಸೇವೆ ಮಾಡುವ ಅವಕಾಶ ನೀಡಲಾಗಿದೆ.
RELATED ARTICLES  ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ.