ಹೊನ್ನಾವರ: ಕರ್ನಾಟಕದ ಬಾರ್ಡೋಲಿ ಎಂದು ಕರೆಸಿಕೊಂಡ ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಸಾರುವ ದಂಡಿ ಚಲನಚಿತ್ರಕ್ಕೆ ಮಾ.18 ರಂದು ಬೆಳಗ್ಗೆ 9ಕ್ಕೆ ಪ್ರಭಾತನಗರದ ಮೂಡಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಲಿದೆ.

ಸ್ವಾತಂತ್ಯದ 75ನೇ ವರ್ಷದ ಹೊಸ್ತಿಲಲ್ಲಿರುವಾಗ ಕೃತಿರೂಪದಲ್ಲಿದ್ದ ಸ್ವಾತಂತ್ರ್ಯ ಚಳವಳಿ ಕಥೆಯ ಸಾರವನ್ನೊಳಗೊಂಡ ಡಾ| ರಾಜೇಶ ಮಠಪತಿ (ರಾಗಂ) ಇವರ ದಂಡಿ ಹೆಸರಿನ ಕಾದಂಬರಿ ಚಲನಚಿತ್ರ ರೂಪದಲ್ಲಿ ಬರಲಿದೆ. ಕಥಾನಾಯಕ ದುಡಿ ಸ್ವಾತಂತ್ರ್ಯ ಚಳವಳಿ ಹಿಂಸಾರೂಪ ತಳೆದಾಗ ಕ್ರಾಂತಿಕಾರಿಯಂತೆ ಕಾಣಿಸಿಕೊಂಡು
ಕೊನೆಗೆ ಜಿಲ್ಲೆಯಲ್ಲಿ ನಡೆದ ಅಹಿಂಸಾತ್ಮಕ ಜಂಗಲ್ ಸತ್ಯಾಗ್ರಹ, ಕಾನೂನುಭಂಗ ಚಳವಳಿ, ಉಪ್ಪಿನ ಸತ್ಯಾಗ್ರಹ ಮೊದಲಾದವುಗಳಿಂದ ಪ್ರೇರಣೆಗೊಂಡು ಗಾಂಧೀಜಿ ಆಹಿಂಸಾ ಮಾರ್ಗದಲ್ಲಿ ನಡೆಯುವುದು ಚಿತ್ರದ ಕಥಾವಸ್ತು.

RELATED ARTICLES  ಫೆಬ್ರುವರಿ 6, 7, 8 ಹಾಗೂ 9ರಂದು ಕರುನಾಡ ಕರಾವಳಿ ಉತ್ಸವ

ನಾಯಕನನ್ನು ಎಳೆಯಾಗಿಟ್ಟುಕೊಂಡು ಜಿಲ್ಲೆಯಲ್ಲಿ ನಡೆದ ಎಲ್ಲ ಹೋರಾಟಗಳ ಪ್ರಮುಖ ಘಟ್ಟಗಳು ಚಿತ್ರದಲ್ಲಿ ಮೂಡಿಬರಲಿದೆ. ಜಿಲ್ಲೆಯ ಸ್ವಾತಂತ್ರ್ಯ ಹೋರಾಟ ಸಾಹಸದ ಎಳೆಎಳೆಗಳನ್ನು ಶಾಂತಾರಾಮ ನಾಯಕ ಹಿಚ್ಚಡ ಮತ್ತು ನಾರಾಯಣ ಶಾನಭಾಗ ಈ ಹಿಂದೆ ದಾಖಲಿಸಿದ್ದಾರೆ, ಅದೇ ಕಾದಂಬರಿಯ ಮೂಲಸಾಮಗ್ರಿ, ಇದನ್ನು ಹೊನ್ನಾವರ ಮೂಲದ ಯಾಜಿ ಪ್ರಕಾಶನ ಪ್ರಕಟಿಸಿದೆ.

ಇದು ಗಟ್ಟಿ ಕಥೆಯ ನೆಲಗಟ್ಟಿನಲ್ಲಿ ಹೆಸರಾಂತ ನಿರ್ದೇಶಕ, ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ವಿಶಾಲರಾಜ್ ಚಿತ್ರ ನಿರ್ದೇಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು ಬೆಂಗಳೂರಿನ ಕಲ್ಯಾಣಿ ಪ್ರೊಡಕ್ಷನ್
ಸಂಸ್ಥೆಯ ಉಷಾರಾಣಿ ಎಸ್.ಸಿ, ಚಿತ್ರ ನಿರ್ಮಾಪಕರಾಗಿದ್ದಾರೆ. ಕಡಲತೀರ, ಗ್ರಾಮೀಣ ಭಾಗ ನದಿ ತೀರದಲ್ಲಿ ಹೋರಾಟ ಕಾಲದ ವಾತಾವರಣ ಮತ್ತು ಸೆಟ್ಗಳನ್ನು ನಿರ್ಮಿಸಿಕೊಂಡು 30ದಿನಗಳ ಒಂದೇ ಶೆಡ್ಯುಲ್‌ನಲ್ಲಿ ಚಿತ್ರ ಮುಗಿಸುವ ಗುರಿ ಇದೆ.

RELATED ARTICLES  ಸುಮನಶ್ರೀ ಪ್ರಶಸ್ತಿಗೆ ನೀಲಾವತಿ ಗೋವಿಂದ ಅಂಬಿಗ ಅವರ ಆಯ್ಕೆ

ಹೆಸರಾಂತ ನಟಿ ತಾರಾ, ನಟ ಸುಚೇಂದ್ರ ಪ್ರಸಾದ, ನಟ ಯುವಾನ್
ದೇವ್, ನಟಿ ಶಾಲಿನಿ ಭಟ್ ಮತ್ತು ಸ್ಥಳೀಯರಾದ ದಾಮೋದರ ನಾಯ್ಕ ಪ್ರಮುಖ ಪಾತ್ರದಲ್ಲಿದ್ದು ಇತರ ಪಾತ್ರಗಳಿಗೆ ಸ್ಥಳೀಯರನ್ನೇ ಆಯ್ಕೆ ಮಾಡಲಾಗಿದೆ.