ಭಟ್ಕಳ: ತಾಲೂಕಿನ ಸಾರದಹೊಳೆಯ ಹೀರೆಹಿತ್ಲು ಸಮೀಪ ಭಿಕ್ಷೆ ಬೇಡುವ ನೆಪ ಮಾಡಿಕೊಂಡು ಮನೆಗೆ ಬಂದ ಭಿಕ್ಷುಕಿ, ಕುಡಿಯಲು ನೀರು ಬೇಕು ಎಂದು ಹೇಳಿ ಮನೆಯಲ್ಲಿದ್ದ ಮಹಿಳೆಗೆ ಭೀತಿ ಹುಟ್ಟಿಸಿ ಮಹಿಳೆಯಿಂದ ಲಕ್ಷಾಂತರ ರೂಪಾಯಿ ಚಿನ್ನ ಪಡೆದು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಸುಕ್ರಿಯ ನಾಯ್ಕ ಮನೆಗೆ ಭಿಕ್ಷೆ ಬೇಡುವ ನೆಪ ಮಾಡಿಕೊಂಡು ಬಂದ ವಂಚಕಿ, ಮನೆಯೊಳಗಿದ್ದ ಮಹಿಳೆಯನ್ನು ವಶೀಕರಣ ಮಾಡಿಕೊಂಡು ಭಯಹುಟ್ಟಿಸಿದ್ದಾಳೆ ಎನ್ನಲಾಗಿದೆ. ನಿಮ್ಮ ಮನೆಯಲ್ಲಿ ಗಂಭೀರ ಸಮಸ್ಯೆಯಿದೆ. ಮೂರು ಸಾವು ಸಂಭವಿಸಲಿದೆ ಎಂದು ಭಯ ಹುಟ್ಟಿಸಿದ್ದಾಳೆ. ಜೊತೆಗೆ ನೀರು ಕುಡಿಯುವ ನೆಪದಲ್ಲಿ ಭಿಕ್ಷುಕಿ, ತನ್ನ ಚಾಲಾಕಿತನ ಪ್ರದರ್ಶಿಸಿ, ತನ್ನ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿದ್ದಾಳೆ.

RELATED ARTICLES  ದೈವೀ ವಿಚಿತ್ರಾಗತಿಃ "ಶ್ರೀಧರಾಮೃತ ವಚನಮಾಲೆ"ಯಿಂದ ಆಯ್ದ ಲೇಖನ

ಭಿಕ್ಷುಕಿಯ ಮಾತು ಕೇಳಿ ಹೆದರಿದ ಮಹಿಳೆ ಸಮಸ್ಯೆಗೆ ಪರಿಹಾರ ಕೇಳಿದ್ದಾಳೆ. ಮೊದಲು 16 ಸಾವಿರ ರೂಪಾಯಿ ಹಣ ನೀಡುವಂತೆ ಕೇಳಿದ್ದಾಳೆ. ಹಣ ಇಲ್ಲವೆಂದು ಹೇಳಿದಾಗ ಹೇಗಾದರು ಮಾಡಿ ಹೊಂದಿಸುವಂತೆ ಹೇಳಿದ್ದಾಳೆ. ಈ ವೇಳೆ ಮಹಿಳೆ ಕಿವಿಯೊಲೆ ಅಡವಿಟ್ಟು ಹಣವನ್ನು ಭಿಕ್ಷುಕಿ ವೇಷಧಾರಿಗೆ ತಂದುಕೊಟ್ಟಿದ್ದಾಳೆ.

RELATED ARTICLES  ರಸ್ತೆಯ ಮಧ್ಯೆಯೇ ಕಂದಕ..!

ಮಹಿಳೆಯ ದೌರ್ಬಲ್ಯ ಅರಿತ ವಂಚಕಿ ಮತ್ತಷ್ಟು ಹೆದರಿ, ಚಿನ್ನಾಭರಣ ಎಗರಿಸುವ ಪ್ಲಾನ್ ಮಾಡಿದ್ದು, ನಿಮ್ಮ ಮನೆಯಲ್ಲಿರುವ ಎಲ್ಲಾ ಚಿನ್ನವನ್ನು ನನಗೆ ನೀಡಬೇಕು. ಇಲ್ಲದಿದ್ದರೆ ನಿಮ್ಮ ಮನೆಯಲ್ಲಿ ಸಾವು ಸಂಭವಿಸುತ್ತದೆ ಎಂದು ಹೆದರಿಸಿದ್ದಾಳೆ. ಈ ಮೂಲಕ ಚಿನ್ನವನ್ನು ದೋಚುವ ಕೆಲಸ‌ಮಾಡಿದ್ದು ಇದೀಗ ಪೊಲೀಸರು ಆಕೆಗಾಗಿ ಬಲೆ‌ಬೀಸಿದ್ದಾರೆ ಎನ್ನಲಾಗಿದೆ.