ಭಟ್ಕಳ : ಮುರುಡೇಶ್ವರದ ಬಸ್ತಿಮಕ್ಕಿ ರೈಲ್ವೆ ಸೇತುವೆ ಬಳಿ ರೈಲು ಹಳಿಯನ್ನು ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ರೈಲು ಬಡಿದು ಸಾವನಪ್ಪಿದ ಘಟನೆ ನಡೆದಿದೆ.

ಸಾವನ್ನಪ್ಪಿರುವ ವ್ಯಕ್ತಿಯನ್ನು ಬೆಂಗ್ರೆ ನಿವಾಸಿ ರಾಜು ಮೊಗೇರ್ ಎಂದು ಗುರುತಿಸಲಾಗಿದೆ.

RELATED ARTICLES  ಕರೋನಾ ಸೈನಿಕರಿಗೆ ನೆರವಾದ ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಪ್ರಮುಖರು.

ಈ ಘಟನೆ ಶನಿವಾರ ರಾತ್ರಿ10:45 ರಿಂದ ಭಾನುವಾರ ಬೆಳಗಿನ ಜಾವ ಆರು ಗಂಟೆಯ ಒಳಗಡೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಘಟನೆಯ ಸುದ್ದಿಯನ್ನು ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಮೃತ ಹೊಂದಿದ ವ್ಯಕ್ತಿಯ ಮೊಬೈಲ್ ಸಹಾಯದಿಂದ ಸಂಬಂಧಿಕರನ್ನು ಪತ್ತೆಹಚ್ಚಲಾಗಿದೆ. ಈ ಘಟನೆ ಬಗ್ಗೆ ಶೇಖರ ಮಾಸ್ತಿ ಮೊಗೇರ್ ಮುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

RELATED ARTICLES  ಸಮುದ್ರದ ಅಲೆಗೆ ಕೊಚ್ಚಿ ಹೋದ ಪ್ರವಾಸಿಗ