ಹೊನ್ನಾವರ : ತಾಲೂಕಿನ ಪಟ್ಟಣದ ಬಸ್ ನಿಲ್ದಾಣ ಸಮೀಪದ ಕಿರಾಣಿ ಅಂಗಡಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಬಗ್ಗೆ ವರದಿಯಾಗಿದೆ.

ಅಗ್ನಿ ಅನಹುತದಿಂದಾಗಿ ದಿನಸಿ ವಸ್ತುಗಳು ಸುಟ್ಟುಕರಕಲಾಗಿದೆ ಎಂದು ಸ್ಥಳೀಯ ಮಾಹಿತಿಗಳು ಲಭ್ಯವಾಗಿದೆ.

RELATED ARTICLES  ಗೋಕರ್ಣ ರಾಮತೀರ್ಥದ ಗುಡ್ಡದ ಮೇಲೆ ಬೆಂಕಿ : ಕೆಲಕಾಲ ಗೊಂದಲ

ತಡರಾತ್ರಿ ಈ ಘಟನೆ ನಡೆದಿದ್ದು, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯರು ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ ಹೊನ್ನಾವರ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ದುರ್ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲವಾಗಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

RELATED ARTICLES  ಸರಸ್ವತಿ ಪ್ರಭಾ ಪುರಸ್ಕಾರ -೨೦೨೨ ಪ್ರಕಟ