ಬೈಕನ್ನು ಕದ್ದು ಪರಾರಿಯಾಗುತ್ತಿದ್ದ ವೇಳೆ ಕಳ್ಳನೋರ್ವ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡು ಪೊಲೀಸರ ಸೆರೆಯಾದ ಘಟನೆ ಅಂಕೋಲಾದಲ್ಲಿ ನಡೆದಿದೆ.ಹುಬ್ಬಳ್ಳಿಯ ಮೂಲದ ಮಂಜುನಾಥ ಕುಲಕರಣಿ ಎಂಬಾತ ಬೈ ಕಳ್ಳತನದಲ್ಲಿ ಸಿಕ್ಕಿ ಬಿದ್ದವ ಎನ್ನಲಾಗಿದೆ.

ಶಿರಕುಳಿಯ ನಾರಾಯಣ ಎಂಬಾತ ತನ್ನ ಕೆಲಸದ ನಿಮಿತ್ತ ಬಾಳೇಗುಳಿ ಗೆ ಬಂದಿದ್ದರು. ಬೈಕನ್ನು ನಿಲ್ಲಿಸಿ ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿರುವಾಗ ಮಂಜುನಾಥ ಎಂಬಾತ ಬೈಕನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದ. ನಂತರ ಮುಂದೆ ಹೋಗುತ್ತಿದ್ದಂತೆ ಅತಿವೇಗದ ಚಾಲನೆಯಿಂದ ಬೈಕ್ ಸ್ಕಿಡ್ ಆಗಿ ಬಿದ್ದಿದೆ.

RELATED ARTICLES  ಸರಳ‌ ನೇರ ನಡೆ- ನುಡಿಗಳಿಂದಲೇ 'ಜನ ಮನ ಗೆದ್ದ ನಾಯಕ' ನ್ಯಾಯವಾದಿ ನಾಗರಾಜ ನಾಯಕ

ಅಲ್ಲಿನ ಸ್ಥಳೀಯರು ಬಿದ್ದು ಗಾಯಗೊಂಡ ಮಂಜುನಾಥನನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದಾಗ ವ್ಯಕ್ತಿ ತನಗೆ ಏನು ಆಗಿಲ್ಲ ತಾನು ಹುಬ್ಬಳ್ಳಿಗೆ ಹೋಗುತ್ತೇನೆ ಎಂದು ಗೋಗರೆದಿದ್ದಾನೆ. ಆದರೂ ತೀವ್ರ ರಕ್ತಸ್ರಾವ ಆದ್ದರಿಂದ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಬೈಕನ್ನು ಪೊಲೀಸ್ ಠಾಣೆಗೆ ಒಯ್ದಿದ್ದರು.

ಆನಂತರ ಬೈಕ್ ಕಳೆದುಕೊಂಡ ವ್ಯಕ್ತಿ ನಾರಾಯಣ ನಾಯಕ್ ಅಂಕೋಲಾ ಪೊಲೀಸ್ ಠಾಣೆಗೆ ಹೋಗಿ ಬೈ ಕಳೆದುಹೋದ ಪ್ರಕರಣವನ್ನು ದಾಖಲಿಸಿದ್ದಾರೆ. ಈ ವೇಳೆ ಪೊಲೀಸರು ಬೈಕ್ ನಂಬರನ್ನು ಪರಿಶೀಲಿಸಿದಾಗ ದಂಗಾಗಿದ್ದಾರೆ. ಏಕೆಂದರೆ ಬೈಕ್ ಚಲಾಯಿಸಿ ಸ್ಕಿಡ್ಡಾಗಿ ಬಿದ್ದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಬೈಕ್ ಅದೇ ಆಗಿತ್ತು. ತಕ್ಷಣವೇ ಪೊಲೀಸರು ಮಂಜುನಾಥ ಕುಲಕರ್ಣಿ ಎಂಬಾತನನ್ನು ವಶಪಡಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

RELATED ARTICLES  ಅಪಘಾತಪಡಿಸಿ ಸಾವಿಗೆ ಕಾರಣನಾದ ವ್ಯಕ್ತಿಗೆ ಶಿಕ್ಷೆ ಪ್ರಕಟ

ಚಾಲಿಕತನದಿಂದ ಕಳ್ಳತನ‌ಮಾಡಲುಹೋದ ವ್ಯಕ್ತಿ ದುರಾದೃಷ್ಟ ಎಂಬಂತೆ ಬೈಕ್ ನಿಂದ ಬಿದ್ದು ಪೆಟ್ಟಾಗಿ ಅಪಘಾತದಲ್ಲಿ ಗಾಯಗೊಂಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.