ಹೊನ್ನಾವರ : ಅಸಮಾನ್ಯ ನೆನಪಿನ ಶಕ್ತಿ, ಹಿಡಿದ ಕೆಲಸವನ್ನು ಪಟ್ಟುಬಿಡದೇ ನಿರ್ವಹಿಸುವ ಛಲ ಬೆಳೆಸಿಕೊಂಡ ಮುತ್ಸದ್ಧಿ, ನಾಡು ಕಂಡ ಸರ್ವಶ್ರೇಷ್ಠ ನಾಯಕ ಆರ್. ವಿ. ದೇಶಪಾಂಡೆ ಎಂದು ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರದ ಸಾಗರ ರೆಸಿಡೆನ್ಸಿ ಸಭಾಭವನದಲ್ಲಿ ಏರ್ಪಡಿಸಿದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಆರ್ ವಿ ದೇಶಪಾಂಡೆಯವರ 74ನೇ ಜನ್ಮದಿನದ ಅಂಗವಾಗಿ ಕೇಕ್ ಕತ್ತರಿಸಿ ಶುಭಾಶಯ ಸಲ್ಲಿಸಿ, ನೆರೆದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೀಪ ಎನ್ ತೆಂಗೇರಿ ಮಾತನಾಡಿ ಆರ್. ವಿ. ದೇಶಪಾಂಡೆಯವರು ಸರ್ವಕಾಲಿಕ ನಾಯಕ ಎಂದು ಹೆಮ್ಮೆ ವ್ಯಕ್ತಪಡಿಸಿ ಶುಭ ಹಾರೈಸಿದರು, ಕೆ.ಪಿ.ಸಿ.ಸಿ. ಮಾರ್ಗದರ್ಶನದಂತೆ ಪ್ರಜಾಪ್ರತಿನಿಧಿ ರಚನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.

RELATED ARTICLES  ಕಾರವಾರ ಆಸ್ಪತ್ರೆಯಿಂದ 6 ಜನ ಡಿಶ್ಚಾರ್ಜ

ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಅಧ್ಯಕ್ಷ ಶಿವಾನಂದ ಹೆಗಡೆ. ದೇಶಪಾಂಡೆಯವರಿಗೆ ಶುಭಾಶಯ ಸಲ್ಲಿಸಿ ದೇಶಪಾಂಡೆಯವರಂತಹ ನಾಯಕರು ಈ ದೇಶಕ್ಕೆ, ರಾಜ್ಯಕ್ಕೆ ಇಂದಿನ ಪರಿಸ್ಥಿತಿಯಲ್ಲಿ ತೀರಾ ಅವಶ್ಯಕ ಎಂದು ಶ್ಲಾಘಿಸಿದರು.

ಯುವ ನಾಯಕ ರವಿಕುಮಾರ ಶೆಟ್ಟಿ ನೂತನ ಗ್ರಾಮ ಪಂಚಾಯತ ಸದಸ್ಯರನ್ನು ಅಭಿನಂದಿಸಿ ಮಾತನಾಡಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್‍ನ ಕಾರ್ಯಚಟುವಟಿಕೆಯನ್ನು ಪ್ರಶಂಸಿಸಿದರು.

RELATED ARTICLES  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಶ್ರೀಧರ ಶೇಟ್ ಶಿರಾಲಿ

ಸಭೆಯಲ್ಲಿ ಹೊನ್ನಾವರ ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಶಕ್ತಿ ವಿಭಾಗದ ಅಧ್ಯಕ್ಷ ಬಾಲಚಂದ್ರ ನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಸಂದೇಶ ಶೆಟ್ಟಿ, ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್. ಗೌಡ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಝಕ್ರಿಯಾ ಶೇಖ್, ಕೆ.ಪಿ.ಸಿ.ಸಿ. ಸದಸ್ಯ ವಿನೋದ ನಾಯ್ಕ, ಇಂದಿರಾ ಪ್ರಿಯದರ್ಶಿನಿ ವಿಭಾಗದ ಸುಧಾ ನಾಯ್ಕ, ಜಿಲ್ಲಾ ಮುಖಂಡರಾದ ರವಿ ಶೆಟ್ಟಿ, ಕವಲಕ್ಕಿ, ದಾಮೋದರ ನಾಯ್ಕ ಇನ್ನೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.