ಲಾಯನ್ಸ್ ಕ್ಲಬ್ ಕುಮಟಾ, ಹಾಗೂ ಶ್ರೀರಾಮ ಮೆಡಿಕಲ್ಸ್ ಕುಮಟಾ ಇವರ ಆಶ್ರಯದಲ್ಲಿ ಕ್ಷೇಮಾ ಟ್ರಸ್ಟ (ರಿ) ಶಿವಮೊಗ್ಗ ಇವರ ಸಹಯೋಗದೊಂದಿಗೆ ದಿವಂಗತ ಗೋವಿಂದರಾಯ ರಾಮಚಂದ್ರ ನಾಯಕ, ಕುಮಟಾ ಇವರ ಸ್ಮರಣಾರ್ಥ ಶ್ರೀ ಮೂಡ್ಲಗಿರಿ ಗೋವಿಂದರಾಯ ನಾಯಕ ಇವರ ಪ್ರಾಯೋಜಕತ್ವದಲ್ಲಿ 70ನೇ ಉಚಿತ ಗ್ರಾಮೀಣ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ
ದಿನಾಂಕ : 21-03-2021, ರವಿವಾರ, ಬೆಳಿಗ್ಗೆ 9-00 ಘಂಟೆಯಿಂದ ಮಧ್ಯಾಹ್ನ 2-00 ಘಂಟೆಯವರೆಗೆ ಲಾಯನ್ಸ್ ಸೇವಾ ಭವನ, ಕೆನರಾ ಹೆಲ್ತಕೇರ್ ಸೆಂಟರ್ ಹತ್ತಿರ, ಬಗ್ಗೋಣದಲ್ಲಿ ನಡೆಯಲಿದೆ.

RELATED ARTICLES  ಸಾಂಸ್ಕೃತಿಕ ಚಟುವಟಿಕೆಗಳ ವಿವಿಧ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ ಆಯ್ಕೆ.

ಈ ಶಿಬಿರದಲ್ಲಿ ಸುಪ್ರಸಿದ್ಧ ಹಾಗೂ ಅತ್ಯಂತ ಅನುಭವೀ ಮಾನಸಿಕ ರೋಗ ತಜ್ಞರಾದ ಡಾ| ಕೆ. ಆರ್. ಶ್ರೀಧರ (ಎಂ.ಡಿ.,ಡಿ.ಪಿ.ಎಮ್.ಶಿವಮೊಗ್ಗಾ) ಇವರು ಉಪಸ್ಥಿತರಿದ್ದು ಶಿಬಿರಾರ್ಥಿಗಳ ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಲಿರುವರು.

RELATED ARTICLES  ಪುಸ್ತಕಗಳೇ ನಿಜವಾದ ಸಂಗಾತಿ : ಝಮೀರುಲ್ಲಾ ಷರೀಫ್

ಡಾ ಕೆ. ಆರ್. ಶ್ರೀಧರ ಕಾರ್ಯಕ್ರಮ ಉದ್ಘಾಟಿಸುವರು.ಡಾ| ವಿ. ಚಂದ್ರಶೇಖರ ಶೆಟ್ಟಿ , ಮೂಡ್ಲಗಿರಿ ಗೋವಿಂದರಾಯ ನಾಯಕ ಅತಿಥಿಗಳಾಗಿ ಹಾಜರಿದ್ದರೆ, ಅಧ್ಯಕ್ಷತೆಯನ್ನು ಲಾಯನ್ಸ್  ಕ್ಲಬ್ ಅಧ್ಯಕ್ಷರಾದ ಲಾಯನ್ ವಿನಯಾ ಎಸ್. ಹೆಗಡೆ ವಹಿಸಿಕೊಳ್ಳುವರು.

ಕಾರ್ಯಕ್ರಮದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಸಂಘಟಕರು ವಿನಂತಿಸಿದ್ದಾರೆ.