ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಅಗ್ರಹಾರ ಹಳದಿಪುರ ಗ್ರಾಮದಲ್ಲಿರುವ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ದೇವರ ಉತ್ಸವ ಮೂರ್ತಿ ಪಕ್ಕದಲ್ಲಿ ಹರಿವಾಣದಲ್ಲಿ ತೆಗೆದಿಟ್ಟಿದ್ದ ದೇವರ ಚಿನ್ನಾಭರಣಗಳನ್ನು ದಿನಾಂಕ 01-03-2021 ರಂದು ಮಧ್ಯಾಹ್ನ 01:00 ಗಂಟೆಯಿಂದ ರಾತ್ರಿ 08:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಪಿರ್ಯಾಧಿ ಶ್ರೀ ಗಣಪತಿ ಸಭಾಹಿತ ಸಾ// ಅಗ್ರಹಾರ ಹಳದಿಪುರ ಗ್ರಾಮ ಹೊನ್ನಾವರ ತಾಲೂಕು ಇವರು ಹೊನ್ನಾವರ ಠಾಣೆಯಲ್ಲಿ ನೀಡಿದ್ದ ದೂರಿನ ಮೇರೆಗೆ ಅಪರಾಧ ಸಂಖ್ಯೆ 55/2021 ಕಲಂ 454, 457, 380 ಐಪಿಸಿ ರೀತ್ಯ ಪ್ರಕರಣ ದಾಖಲಾಗಿತ್ತು.

ಶ್ರೀ ಶಿವಪ್ರಕಾಶ ದೇವರಾಜು ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ, ಶ್ರೀ ಎಸ್. ಬದ್ರಿನಾಥ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ ಹಾಗೂ ಶ್ರೀ ಬೆಳ್ಳಿಯಪ್ಪ ಮಾನ್ಯ ಪೊಲೀಸ್ ಉಪಾಧೀಕ್ಷಕರು ಭಟ್ಕಳ ಉಪವಿಭಾಗ ಭಟ್ಕಳ ರವರ ಮಾರ್ಗದರ್ಶನದಲ್ಲಿ ಶ್ರೀಧರ ಎಸ್.ಆರ್ ಸಿ‌.ಪಿ.ಐ ಹೊನ್ನಾವರ ವೃತ್ತ ರವರ ನೇತೃತ್ವದಲ್ಲಿ ಹೊನ್ನಾವರ ಠಾಣೆಯ ಅಧಿಕಾರಿ ಸಿಬ್ಬಂದಿಯವರಾದ 1) ಶ್ರೀ ಶಶಿಕುಮಾರ ಪಿ.ಎಸ್.ಐ ಕಾ&ಸು 2) ಶ್ರೀಮತಿ ಸಾವಿತ್ರಿ ನಾಯಕ ಪಿ.ಎಸ್.ಐ ಕ್ರೈಂ, 3) ಶ್ರೀ ಗಣೇಶ ಎಚ್ ನಾಯ್ಕ ಎ.ಎಸ್.ಐ , 4) ಸಿ.ಎಚ್.ಸಿ ಶ್ರೀ ಕೃಷ್ಣಾ ಡಿ ಗೌಡ, 5) ಸಿ.ಎಚ್.ಸಿ ಶ್ರೀ ಉದಯ ಮಗದೂರ, 6) ಸಿ.ಎಚ್.ಸಿ ರಮಾನಂದ ನಾಯ್ಕ 7) ಸಿ.ಎಚ್.ಸಿ ಶಿವಾನಂದ ಚಿತ್ರಗಿ 8) ಸಿಪಿಸಿ ಶ್ರೀ ರಮೇಶ ಲಮಾಣಿ 9) ಸಿಪಿಸಿ ರಯೀಸ್ ಭಗವಾನ್ 10) ಸಿಪಿಸಿ ಮಹಾವೀರ 11) ಎ.ಎಚ್.ಸಿ ಶ್ರೀ ಚಂದ್ರು ನಾಯ್ಕ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ 12) ಸಿ.ಎಚ್.ಸಿ ಶ್ರೀ ಸುಧೀರ್ ಮಡಿವಾಳ, 13) ಸಿಪಿಸಿ ಶ್ರೀ ರಮೇಶ ನಾಯ್ಕ ಇವರನ್ನೊಳಗೊಂಡ ತಂಡವು ದೇವಸ್ಥಾನ ಕಳ್ಳತನ ಪ್ರಕರಣವನ್ನು ಬೇಧಿಸಿ  ಆರೋಪಿ ಅನಿಲ ವೆಂಕಟೇಶ ರಾಯ್ಕರ ಪ್ರಾಯ 33 ವರ್ಷ ಸಾ// ಸೋನಾರಕೇರಿ ಕರ್ಕಿ, ಹೊನ್ನಾವರ ತಾಲೂಕು ಈತನನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ದಸ್ತಗಿರಿ ಮಾಡಿ ಅರೋಪಿಯಿಂದ ಕಳುವಾದ ಸುಮಾರು ರೂ.84000/- ಮೌಲ್ಯದ 21 ಗ್ರಾಂ ಚಿನ್ನ ವನ್ನು ಹಾಗೂ ರೂ.4000 /- ಮೌಲ್ಯದ ಮೊಬೈಲ್ ಪೋನ್ ನ್ನು ಜಪ್ತುಪಡಿಸಿಕೊಂಡಿರುತ್ತಾರೆ.

RELATED ARTICLES  ಹಾಲಾಡಿ ಬಗ್ಗೆ ಒಲವು ತೋರಿದ ಬಿ ಎಸ್ ವೈ

ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು ಕಾರವಾರ ಜಿಲ್ಲಾ ಕಾರಾಗೃಹದಲ್ಲಿರುತ್ತಾನೆ‌. ದೇವಸ್ಥಾನ ಕಳ್ಳತನ ಪ್ರಕರಣದ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

RELATED ARTICLES  ಸುಕ್ರಿ ಗೌಡ ಗಂಗಾವಳಿ ನದಿಯ ಮೂರ್ತರೂಪ : ಅರವಿಂದ ಕರ್ಕಿಕೋಡಿ